ಮಾ.31: ಆಳ್ವಾಸ್‌ನಲ್ಲಿ ‘ತುಳು ರಂಗ್ 2018’
ಮೂಡುಬಿದಿರೆ, ಮಾ. 30: ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಮೂಡುಬಿದಿರೆ ಇದರ ಆಶ್ರಯದಲ್ಲಿ ‘ತುಳು ರಂಗ್ 2018’ ಕಾರ್ಯಕ್ರಮವು ಮಾ.31ರಂದು ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆಯಲಿದೆ.
ಬೆಳಗ್ಗೆ 9.30ರಿಂದ ತುಳುನಾಡಿನ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ವಿವಿಧ ಸ್ಪರ್ಧೆಗಳು, ಮಧ್ಯಾಹ್ನ 3 ಗಂಟೆಗೆ ಪ್ರಶಂಸ ಕಾಪು ತಂಡದಿಂದ ‘ಬಲೇ ತೆಲಿಪುಲೆ’ ಕಾರ್ಯಕ್ರಮ ಹಾಗೂ 3.30ಕ್ಕೆ ಸಮಾರೋಪ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ವಹಿಸಲಿದ್ದು, ತುಳು ಸಿನಿಮಾ, ನಾಟಕ ಕಲಾವಿದ ಅರವಿಂದ ಬೋಳಾರ್ ಮುಖ್ಯ ಅತಿಥಿಗಳಾಗಿರುವರು. ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಉಪಸ್ಥಿತರಿರುವರು ಎಂದು ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಯೋಗೀಶ್ ಕೈರೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





