ಮಂಗಳೂರು: ಕಾಡ್ಸ್ ಸಂವೇದನ ಮಕ್ಕಳ ಮನೆಯಲಿ ಗುಡ್‌ಫ್ರೈಡೆ ಆಚರಣೆ

ಮಂಗಳೂರು, ಮಾ,30: ಸಂತ ಕ್ರಿಸ್ತೋಫರ್ ಅಸೋಸಿಯೇಶನ್ ಮಂಗಳೂರು ಇದರ ವತಿಯಿಂದ ನಗರದ ಅಡುಮರೋಳಿಯಲ್ಲಿರುವ ಕಾಡ್ಸ್ ಸಂವೇದನ ಮಕ್ಕಳ ಮನೆಯಲ್ಲಿ ಗುಡ್‌ಫ್ರೈಡೆ ಆಚರಿಸಲಾಯಿತು. ಈ ಸಂದರ್ಭ ಅಲ್ಲಿನ ಮಕ್ಕಳೊಡನೆ ಬೆರೆತು ದಿನಸಿ ಸಾಮಾಗ್ರಿಗಳನ್ನು ನೀಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಪೊರೇಟರ್ ಕೇಶವ ಮರೋಳಿ ಮಾತಾನಾಡಿ ಏಸು ಕ್ರಿಸ್ತರು ಶಾಂತಿ ಪ್ರೀತಿ ಮತ್ತು ಸೇವೆಯ ದೂತರಾಗಿದ್ದರು. ಈ ಸಂದೇಶವನಿಟ್ಟು ಕ್ರಿಸ್ತೋಫರ್ ಎಸೋಸಿಯೇಶನ್ 50 ವರ್ಷಗಳಿಂದ ವಿವಿಧ ಆಶ್ರಮಗಳಿಗೆ ತೆರಳಿ ಹಬ್ಬ ಆಚರಿಸುವುದು ಶ್ಲಾಘನಾರ್ಹ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಸೋಸಿಯೇಶನ್ ಗೌರವಾಧ್ಯಕ್ಷ ಸುಶೀಲ್ ನೊರೊನ್ಹ ಕ್ರೈಸ್ತ ಸಮುದಾಯವು ವಿಶೇಷವಾಗಿ 40 ದಿನಗಳ ಭಕ್ತಿ ಮತ್ತು ಶ್ರದ್ಧೆ ಹಾಗೂ ಉಪವಾಸ ಮೂಲಕ ಏಸು ಕ್ರಿಸ್ತರ ಕಷ್ಟಕಾರ್ಪಾಣ್ಯಗಳನ್ನು ಜೀವನದಲ್ಲಿ ನೆನಪಿಸಿಕೊಳ್ಳುವುದು ವಾಡಿಕೆ. ಏಸು ಕ್ರಿಸ್ತರು ಯಾವುದೇ ಪಾಪವನ್ನು ಮಾಡದೇ ಮಾನವನ ಪಾಪಗೋಸ್ಕರ ತನ್ನನ್ನೇ ಬಲಿ ಅರ್ಪಿಸಿದ ಈ ದಿನದಂದು ಸೇವೆ ಮಾಡಲಾಗುತ್ತದೆ ಎಂದರು.
ಅಸೋಸಿಯೇಶನ್ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಸ್ವಾಗತಿಸಿದರು. ಕಾರ್ಯದರ್ಶಿ ನೈಝಿಲ್ ಪಿರೇರ ವಂದಿಸಿದರು. ಸಂವೇದನದ ಮೇಲ್ವಿಚಾರಕಿ ಜಯ ಸಾಲಿಯನ್ ಕಾರ್ಯಕ್ರಮ ನಿರೂಪಿಸಿದರು
ಕಾರ್ಯಕ್ರಮದಲ್ಲಿ ಸಹ ಕಾರ್ಯದರ್ಶಿ ಲೀನಾ ಡಿಸೋಜ, ಡೆನಿಸ್ ಲೊಬೊ, ಜುಲಿಯಾನ ಡಯಸ್, ಜೆರಾಲ್ಡ್ ಡಿಸೋಜ, ಜಾನ್ ರೊಡ್ರೀಗಸ್, ಆಂತೊನಿ ಡಿಸೋಜ, ಓಸ್ವಲ್ಡ್ ಡಿಕುನ್ಹಾ ಉಪಸ್ಥಿತರಿದ್ದರು.







