ಕೋಸ್ಟಲ್ ಡಿಜಿಟಲ್ ಸರ್ವೀಸ್‌ನ ಸೇವಾ ಕೇಂದ್ರದ ಉದ್ಘಾಟನೆ

ಬಂಟ್ವಾಳ, ಮಾ. 30: ಬಿ.ಸಿ.ರೋಡ್‌ನ ಕೈಕಂಬದಲ್ಲಿ ನೂತನವಾಗಿ ಆರಂಭವಾದ ಕೋಸ್ಟಲ್ ಡಿಜಿಟಲ್ ಸರ್ವೀಸ್‌ನ ಸೇವಾ ಕೇಂದ್ರವನ್ನು ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಾರ್ವಜನಿಕರು ಮಾಹಿತಿಯ ಕೊರತೆಯಿಂದ ದಾಖಲೆ ಪತ್ರಗಳಿಗಾಗಿ ಏಜೆಂಟ್‌ಗಳಿಗೆ ದುಪ್ಪಟ್ಟು ಹಣ ನೀಡಿ ವಂಚನೆ ಗೊಳಗಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಸಾಮಾಜಿಕ ಸೇವಾ ಕೇಂದ್ರಗಳ ಅಗತ್ಯವಿದೆ ಎಂದು ಹೇಳಿದರು. ಸೇವಾ ಕೇಂದ್ರದ ವ್ಯವಸ್ಥಾಪಕ ಅಶ್ವಾನ್ ಸಾದಿಕ್ ಮಾತನಾಡಿ, ಈ ಸೇವಾಕೇಂದ್ರದಲ್ಲಿ ಆಧಾರ್‌ಕಾರ್ಡ್, ರೇಶನ್ ಕಾರ್ಡ್, ಪಾಸ್‌ಪೋರ್ಟ್ ಸೇವೆ, ವಿಸಾ ಇಮಿಗ್ರೇಶನ್, ರೈಲ್ವೆ, ಬಸ್, ವಿಮಾನ ಟಿಕೆಟ್ ಹಾಗೂ ಸರಕಾರಿ ಸೌಲಭ್ಯಗಳ ಮಾಹಿತಿಗಳು ಲಭ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಬಂಟ್ವಾಳ ಪುರಸಭಾ ಸದಸ್ಯರಾದ ಮುಮ್ತಾರ್, ಇಕ್ಬಾಲ್ ಗೂಡಿನಬಳಿ ಉಪಸ್ಥಿತರಿದ್ದರು. ಇರ್ಶಾದ್ ಕಾರ್ಯಕ್ರಮ ನಿರೂಪಿಸಿದರು.
Next Story





