ಹೆಬ್ರಿ: ಎ.13ರಿಂದ ಬ್ರಹ್ಮಬೈದರ್ಕಳ ನೇಮೋತ್ಸವ
ಹೆಬ್ರಿ, ಮಾ.30: ಹೆಬ್ರಿಯ ತಾಣ ಅರ್ಧನಾರೀಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಎ.13ರಿಂದ 18ರವರೆಗೆ ನಡೆಯಲಿದೆ.13ರಂದು ನಾಲ್ದಾಣ ಬ್ರಹ್ಮದೇವರಿಗೆ ಮಹಾ ರಂಗಪೂಜೆ, 14ರಂದು ಸಿರಿಜಾತ್ರೆ, 15ರಂದು ಅಂಬಡಿ ಉತ್ಸವ, 16ರಂದು ಬೀದಿ ಉತ್ಸವ ಸಹಿತ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ನಡೆಯಲಿದೆ.
17ರಂದು ಬೆಳಗ್ಗೆ ಗುಂಡ ಮೂಹೂರ್ತ, ಸಂಜೆ ಬ್ರಹ್ಮಬೈದರ್ಕಳ ನೇಮೋತ್ಸವ, ಬಂಟರ ದೇವರ ಮುಖಾಭಿಲೆ, ಮಾರಿ ಶಿವರಾಯನ ದರ್ಶನ, ಜೋಗಿ ಪುರುಷನ ಕೋಲ, ಮಾಯಂದಲೆ ಅಮ್ಮನ ಕೋಲ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವ್ಯವಸ್ಥಾಪನಾ ಸಮಿತಿಯ ಪ್ರಕಟಣೆ ತಿಳಿಸಿದೆ.
Next Story





