ದಿಲ್ಲಿ ವಿ.ವಿ. ವಿದ್ಯಾರ್ಥಿ ಹತ್ಯೆ : ಆರೋಪಿಯ ಬಂಧನ

ಹೊಸದಿಲ್ಲಿ, ಮಾ. 30: ದಿಲ್ಲಿ ವಿಶ್ವವಿದ್ಯಾನಿಲಯದ 21 ವರ್ಷದ ವಿದ್ಯಾರ್ಥಿಯ ಮೃತದೇಹ ದ್ವಾರಕಾದಲ್ಲಿ ಚರಂಡಿ ಸಮೀಪ ಪತ್ತೆಯಾದ ದಿನದ ಬಳಿಕ ಪೊಲೀಸರು ಆರೋಪಿ ಇಸ್ತಿಯಾಕ್ (25)ನನ್ನು ಬಂಧಿಸಿದ್ದಾರೆ.
ಹತ್ಯೆಯನ್ನು ಒಪ್ಪಿಕೊಂಡಿರುವ ಫ್ಯಾಶನ್ ಡಿಸೈನರ್ ಇಸ್ತಿಯಾಕ್, ‘‘ತಾನು ವಿದ್ಯಾರ್ಥಿಯನ್ನು ಮಾರ್ಚ್ 22ರಂದು ಹತ್ಯೆ ಮಾಡಿದೆ’’ ಎಂದಿದ್ದಾರೆ. ವಿದ್ಯಾರ್ಥಿಯ ಕುಟುಂಬ ಹಾಗೂ ಪೊಲೀಸರನ್ನು ದಾರಿ ತಪ್ಪಿಸಲು ತಾನು ಅಪಹರಣದ ಕಥೆ ಹೆಣೆದೆ ಎಂದು ಅವರು ತಿಳಿಸಿದ್ದಾರೆ. ತಾನು ಡೇಟಿಂಗ್ ಸೈಟ್‌ನ ಮೂಲಕ ವಿದ್ಯಾರ್ಥಿಯ ಸಂಪರ್ಕದಲ್ಲಿದ್ದೆ ಹಾಗೂ 10 ದಿನಗಳಲ್ಲಿ ಮೂರು ಬಾರಿ ಆತನನ್ನು ಭೇಟಿಯಾಗಿದ್ದೆ ಎಂದು ಆರೋಪಿ ಹೇಳಿದ್ದಾರೆ. ಗುರುವಾರ ಮನೆಯಿಂದ ಕಾಲೇಜಿಗೆ ತೆರಳಿದ್ದ ರಾಮ್‌ಲಾಲ್ ಆನಂದ್ ಕಾಲೇಜಿನ ಅಂತಿಮ ವರ್ಷದ ವಾಣಿಜ್ಯ ವಿದ್ಯಾರ್ಥಿ ಆಯುಷ್ ನಾತಿಯಾಲ್ ನಾಪತ್ತೆಯಾಗಿದ್ದರು. ಅನಂತರ ಅವರ ಮೊಬೈಲ್‌ನಿಂದ ಕುಟುಂಬದವರು ವಾಟ್ಸ್ ಆ್ಯಪ್ ಸಂದೇಶ ಸ್ವೀಕರಿಸಿದ್ದರು. ಅದರಲ್ಲಿ ಆಯುಷ್‌ನನ್ನು ಬಿಡುಗಡೆ ಮಾಡಲು 50 ಲಕ್ಷ ರೂ. ನೀಡುವಂತೆ ಆಗ್ರಹಿಸಲಾಗಿತ್ತು.





