ಥಾಯ್ಲೆಂಡ್ ಬಸ್‌ನಲ್ಲಿ ಬೆಂಕಿ: 20 ಮ್ಯಾನ್ಮಾರ್ ವಲಸಿಗರು ಭಸ್ಮ

ಬ್ಯಾಂಕಾಕ್ (ಥಾಯ್ಲೆಂಡ್), ಮಾ. 30: ಥಾಯ್ಲೆಂಡ್‌ನ ಗಡಿ ಪಟ್ಟಣವೊಂದರಿಂದ ರಾಜಧಾನಿ ಬ್ಯಾಂಕಾಕ್‌ಗೆ ಮ್ಯಾನ್ಮಾರ್‌ನ ವಲಸಿಗ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ಸೊಂದರಲ್ಲಿ ಶುಕ್ರವಾರ ಮುಂಜಾನೆ ಅಗ್ನಿ ದುರಂತ ಸಂಭವಿಸಿದ್ದು, 20 ಕಾರ್ಮಿಕರು ಮೃತಪಟ್ಟಿದ್ದಾರೆ.
ನಾಲ್ಕು ಬಸ್‌ಗಳಲ್ಲಿ ಮ್ಯಾನ್ಮಾರ್ ನಿರಾಶ್ರಿತರನ್ನು ಥಾಯ್ಲೆಂಡ್ ರಾಜಧಾನಿಗೆ ಕರೆದೊಯ್ಯಲಾಗುತ್ತಿತ್ತು. ಆ ಪೈಕಿ ಒಂದರಲ್ಲಿ ಬೆಂಕ ಹೊತ್ತಿಕೊಂಡಿದೆ.
‘‘ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಈಗ 20. ಮೂವರು ಗಾಯಗೊಂಡಿದ್ದಾರೆ’’ ಎಂದು ವಿಪತ್ತು ನಿರ್ವಹಣಾ ಇಲಾಖೆಯ ಅಧಿಕಾರಿ ಪೊಲ್ಲವಟ್ ಸಪ್ಸೊಂಗ್‌ಸುಕ್ ಹೇಳಿದರು.
ಬಸ್‌ನಲ್ಲಿ 47 ಮಂದಿ ಪ್ರಯಾಣಿಸುತ್ತಿದ್ದರು ಎಂದು ಟಕ್ ಪ್ರಾಂತದ ರಕ್ಷಣಾ ಕಾರ್ಯಕರ್ತರೊಬ್ಬರು ತಿಳಿಸಿದರು.
ಮ್ಯಾನ್ಮಾರ್‌ನೊಂದಿಗೆ ಗಡಿ ಹಂಚಿಕೊಂಡಿರುವ ಟಕ್ ಪ್ರಾಂತದಲ್ಲಿ ಮುಂಜಾನೆ 1:25ಕ್ಕೆ ದುರಂತ ಸಂಭವಿಸಿದೆ.
Next Story





