Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕಿಚ್ಚು ದೈವವೆಂದು ಹವಿಯನಿಕ್ಕುವ

ಕಿಚ್ಚು ದೈವವೆಂದು ಹವಿಯನಿಕ್ಕುವ

ವಾರ್ತಾಭಾರತಿವಾರ್ತಾಭಾರತಿ31 March 2018 12:07 AM IST
share
ಕಿಚ್ಚು ದೈವವೆಂದು ಹವಿಯನಿಕ್ಕುವ

ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ ಮನೆಯಲು
ಕಿಚ್ಚೆದ್ದು ಸುಡುವಾಗ
ಬಚ್ಚಲ ನೀರು ಬೀದಿಯ ಧೂಳ ಹೊಯ್ದು
ಬೊಬ್ಬಿಟ್ಟೆಲ್ಲರ ಕರೆವರಯ್ಯೆ
ಕೂಡಲಸಂಗಮದೇವಾ
ವಂದನೆಯ ಮರೆದು ನಿಂದಿಸುತ್ತಿದ್ದರು.
                                         -ಬಸವಣ್ಣ

ಬಸವಣ್ಣನವರು ಮಾನವ ಜನಾಂಗವನ್ನು ಒಂದುಗೂಡಿಸುವ ಮಹಾ ಕನಸುಗಾರರಾಗಿದ್ದರು. ಅದಕ್ಕಾಗಿ ‘ಒಬ್ಬನೇ ದೇವರು ಮತ್ತು ಒಂದೇ ಭೂಮಿ’ ಎಂಬ ಸತ್ಯವನ್ನು ಸಾರುವುದು ಅವರ ಉದ್ದೇಶವಾಗಿತ್ತು. ಅಗಣಿತ ದೇವಾನುದೇವತೆಗಳಿಂದ ಮಾನವ ಜನಾಂಗ ಛಿದ್ರವಿಚ್ಛಿದ್ರವಾಗಿದೆ. ‘ದೇವನೊಬ್ಬ ನಾಮ ಹಲವು’ ಎಂದು ಬಸವಣ್ಣನವರು ಹೇಳಿದ್ದಾರೆ. ಪಂಚಮಹಾಭೂತಗಳಾದ ಪೃಥ್ವಿ, ಆಪ್, ತೇಜ್, ವಾಯು ಮತ್ತು ಆಕಾಶವನ್ನು ದೇವರೆಂದು ಹೇಳಲಿಕ್ಕಾಗದು. ಹೀಗೆ ಕಂಡದ್ದೆಲ್ಲ ದೇವರಾದಾಗ ಧ್ಯಾನ ಸಾಧಿಸದು. ನೀರು, ಪಾನಿ, ತಣ್ಣಿ, ವಾಟರ್, ಜಲ, ಉದಕ, ಉದಾ, ಆಪ್ ಹೀಗೆ ಈ ಶಬ್ದಗಳು ವಿವಿಧ ಭಾಷೆಗಳಲ್ಲಿ ನೀರಿಗಾಗಿ ಇರುವ ಶಬ್ದಗಳೇ ಆಗಿವೆ. ಹಾಗೆಯೆ ಎಲ್ಲ ಧರ್ಮಗಳ ದೇವರುಗಳು ಒಬ್ಬನೇ ದೇವರ ಪ್ರತೀಕಗಳಾಗಿವೆ.
ಹೋಮಾಗ್ನಿಯನ್ನು ದೇವರು ಎಂದು ಕರೆಯುವ ಬ್ರಾಹ್ಮಣರು ಅದಕ್ಕೆ ತುಪ್ಪ, ಹಾಲು, ಧಾನ್ಯ, ರೇಷ್ಮೆಬಟ್ಟೆ ಮುಂತಾದುವುಗಳನ್ನು ಆಹುತಿ ಕೊಡುತ್ತಾರೆ. ಆದರೆ ಅದೇ ಅಗ್ನಿಯಿಂದ ಮನೆಗೆ ಬೆಂಕಿ ಹತ್ತಿದರೆ ಗಾಬರಿಗೊಂಡು ಅದನ್ನು ಆರಿಸುವುದಕ್ಕಾಗಿ ಬಚ್ಚಲ ನೀರನ್ನೂ, ಬೀದಿಯ ಮಣ್ಣನ್ನೂ ಬಳಸುತ್ತಾರೆ. ಜೋರಾಗಿ ಕೂಗಿ, ಬೆಂಕಿ ಆರಿಸಲು ಎಲ್ಲ ಜಾತಿಮತಗಳವರ ಸಹಾಯ ಬಯಸುತ್ತಾರೆ. ಆಗ ಆ ಬೆಂಕಿಯನ್ನು ‘ಅಗ್ನಿದೇವ’ ಎಂದು ಗೌರವದಿಂದ ಕರೆಯದೆ ನಿಂದಿಸುತ್ತಾರೆ ಎಂದು ಬಸವಣ್ಣನವರು ಹೇಳಿದ್ದಾರೆ. ‘ಕಿಚ್ಚು’ ಎಂದು ಕರೆಯುವುದರ ಮೂಲಕ ಅದು ಅಗ್ನಿದೇವ ಎಂಬ ವೆೀದಸತ್ಯವನ್ನು ಅಲ್ಲಗಳೆಯುತ್ತಾರೆ.
ಬೇರೊಂದು ವಚನದಲ್ಲಿ ‘ಭೂದೇವಿ’ ಎಂದು ಕರೆಯುವ ಬದಲು ಅದಕ್ಕೆ ‘ನೆಲ’ ಎಂದು ಸಾಮಾನ್ಯ ಶಬ್ದವನ್ನೇ ಬಳಸುತ್ತಾರೆ. ‘ಜಲದೇವತೆ’ ಎನ್ನದೆ ‘ಜಲ’ ಎನ್ನುತ್ತಾರೆ. ‘ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ, ಜಲವೊಂದೆ ಶೌಚಾಚಮನಕ್ಕೆ’ ಎಂದು ಹೇಳುವ ಮೂಲಕ ಅವುಗಳಿಗೆ ಆರೋಪಿಸಿದ ದೈವತ್ವವನ್ನು ಅಲ್ಲಗಳೆದು ಅವೆಲ್ಲ ಕಟ್ಟುಕಥೆ (ಮಿಥ್) ಎನ್ನುತ್ತಾರೆ. ಈ ಮಿಥ್‌ಗಳ ರಹಸ್ಯವನ್ನು ಭೇದಿಸುತ್ತಾರೆ. ಹೊಲಗೇರಿಯ ನೆಲ ಮತ್ತು ಶಿವಾಲಯದ ನೆಲ ಒಂದೇ. ಶೌಚಕ್ಕಾಗಿ ಬಳಸುವ ನೀರು ಮತ್ತು ಸಂಧ್ಯಾವಂದನೆ ಮುಂತಾದ ವೈದಿಕ ಕರ್ಮಗಳನ್ನು ಮಾಡುವ ಸಂದರ್ಭದಲ್ಲಿ ಶುದ್ಧಿಗಾಗಿ ಅಂಗೈ ಗುಳಿಯಲ್ಲಿ ಮಂತ್ರಪೂರ್ವಕವಾಗಿ ಕುಡಿಯುವ ಶುದ್ಧೋದಕದ ಮೂಲ ಒಂದೇ. ವಸ್ತುಗಳಿಗೆ ಅವುಗಳದ್ದೇ ಆದ ಗುಣಧರ್ಮಗಳಿವೆ. ಅವುಗಳನ್ನು ಹಿತಮಿತವಾಗಿ ದೇವರು ಕೊಟ್ಟ ಪ್ರಸಾದವೆಂದು ಬಳಸಬೇಕು. ಏಕದೇವೋಪಾಸನೆಯ ಮೂಲಕ ದೇವರು ಮತ್ತು ಮಾನವಕುಲದ ಜೊತೆ ಏಕತೆ ಸಾಧಿಸಬೇಕು ಎಂಬುದು ಬಸವಣ್ಣನವರ ಆಶಯವಾಗಿದೆ.

***

share
ವಾರ್ತಾಭಾರತಿ
ವಾರ್ತಾಭಾರತಿ
Next Story
X