Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಮೌನದ ಸೆರಗು ಹಿಡಿದು

ಮೌನದ ಸೆರಗು ಹಿಡಿದು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ31 March 2018 12:09 AM IST
share
ಮೌನದ ಸೆರಗು ಹಿಡಿದು

 ಸಾಗುವ ಕವಿತೆಗಳು....
‘‘ಬರಿಗಾಲಲಿ ಹತ್ತು ಗಾವುದವಾಗಲಿ
ನೂರು ಗಾವುದವಾಗಲಿ
ನಡೆದು ಸವೆಸುವೆನು
ನನ್ನ ಬಡತನದ ಬದುಕು
ನಿನ್ನ ಸಿರಿತನಕ್ಕೆ ಏಣಿ ಆಗುವುದಾದರೆ ಆಗಲಿ ಸಂತೋಷ
ನಿನಗೆ ಅರ್ಪಿತವಾದರೆ ಸಾಕು’’

ಇಂತಹ ಭಾವಗೀತಾತ್ಮಕ ಸಾಲುಗಳನ್ನು ಬರೆಯುವ ನರಸಿಂಹ ಮೂರ್ತಿ ಹೂವಿನ ಹಳ್ಳಿ ಅವರ ‘ವೌನದ ಸೆರಗು’ ಕವನ ಸಂಕಲನ ಕನಸುಗಳ ತುಂಬಿಕೊಂಡು ಗಾಳಿಯಲ್ಲಿ ಹಾರಾಡುತ್ತಿರುವ ಬಲೂನು. ಭಾವುಕ ಸಾಲುಗಳು ಈ ಕವಿತೆಯ ಹೆಗ್ಗಳಿಕೆಯು ಹೇಗೋ ಕೆಲವೊಮ್ಮೆ ಮಿತಿಗಳನ್ನೂ ಹೇರುತ್ತದೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಸ್ಫೋಟಿಸಲಾಗದ ಸಿಟ್ಟು ಸೆಡವುಗಳನ್ನು ಒಡಲೊಳಗಿಟ್ಟು ನಮ್ಮನ್ನು ಮುಖಾಮುಖಿಯಾಗುತ್ತವೆ. ರಾಜಕೀಯ, ಸಾಮಾಜಿಕ ವಿಷಯಗಳನ್ನೂ ಮಾತನಾಡುತ್ತವೆ. ‘‘ಬಲ ಇರುವವರ ಬೆಪ್ಪು ಬೆರಗಿಗೆ ನೊಂದು
ಸೊರಗಿರುವ ಕಂದಮ್ಮಗಳ ನೆನಪಿನ ಹಾಡ ಹಾಡು’’ ಎಂದು ಬರೆಯುವ ಕವಿ ‘ಬೀಸುವ ಕಲ್ಲಿಗೆ ಕೆಲಸ ಸಿಗಲಿ/ಪದ ಕಟ್ಟಿ ಕೋಶ ಬೆಳೆಸಿದ/ಆಲದ ಮರ ಬೇರು ಬಿಡಲಿ’’ ಎಂದು ಪದ್ಯಗಳ ಮೂಲಕ ಬಯಸುತ್ತಾರೆ. ಡಾ. ನಟರಾಜ್ ಹುಳಿಯಾರ್ ಹೇಳುವಂತೆ ‘‘ಬಡತನ ಹಾಗೂ ಬಗೆ ಬಗೆಯ ದಮನಗಳನ್ನು ತಮ್ಮ ಕಾವ್ಯದ ವಸ್ತುವಾಗಿಸಿಕೊಂಡು ದುಃಖ ಹಾಗೂ ಸಿಟ್ಟಿನಿಂದ ಬರೆಯುವ ಕವಿ, ಗ್ರಾಮ ಹಾಗೂ ನಗರಗಳ ಬಿಕ್ಕಟ್ಟುಗಳ ಚಿತ್ರಗಳನ್ನು ತಮ್ಮ ಪದ್ಯಗಳಲ್ಲಿ ಜೋಡಿಸಲೆತ್ನಿಸಿದ್ದಾರೆ’’. ಸದ್ಯದ ರಾಜಕೀಯ ಸಂದರ್ಭಗಳನ್ನೂ ಕವಿ ರೂಪಕಗಳ ಮೂಲಕ ವಿವರಿಸುವ ಪ್ರಯತ್ನ ಮಾಡುತ್ತಾರೆ ‘‘ಚರಕದ ಚಕ್ರ ತಿರುಗತ್ತಿಲ್ಲ
ಚಹತ್ತಿಯ ನೂಲಿನ ಹುರಿ ಬಿಟ್ಟವರು
ನೇಯುವ ಮಗ್ಗದವರು ಮುಗ್ಗಿ ಹೋಗಿದ್ದಾರೆ
ನೀರಲ್ಲಿ ಜಾಲಿಸಿ, ಹಿಂಡಿ, ಬಿಸಿಲಿಗೆ ಹರಡಬೇಕು
ಜಾಗ ಬಿಡುತ್ತಿಲ್ಲ, ಅವರವರ ಕೆಲಸ ಕಾರ್ಯಗಳಲ್ಲಿ ಓಡಾಡುತ್ತಿದ್ದಾರೆ
ಉಪ್ಪಿಗಿಷ್ಟು ಚುರುಕು ಮುಟ್ಟಿಸಿ ಅಡುಗೆ ಮಾಡಬೇಕು(ಗಾಂಧಿ)’

ಗಾಂಧೀವಾದದ ಹತಾಶ ಸ್ಥಿತಿ, ಜಡತೆಯತ್ತ ಚಲಿಸುತ್ತಿರುವ ಗ್ರಾಮೀಣ ಭಾರತ, ಹಿಂಸಾಮಯ ಸಮಾಜ, ಅಲ್ಲಿಂದ ಹುಟ್ಟುವ ಗಾಂಧೀವಾದಕ್ಕೆ ಮರುಸ್ಪರ್ಶ ನೀಡಬೇಕೆನ್ನುವ ಆಶಯ ಇವೆಲ್ಲವನ್ನೂ ಈ ಸಾಲುಗಳು ಕಾಣಿಸಲು ಯತ್ನಿಸುತ್ತವೆ. ಸುಮಾರು 20 ಕವಿತೆಗಳು ಈ ಸಂಕಲನದಲ್ಲಿವೆ. 122 ಪುಟಗಳ ಈ ಕೃತಿಯ ಮುಖಬೆಲೆ 80 ರೂಪಾಯಿ. ಪ್ರೇರಣಾ ಪ್ರಕಾಶನ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. ಆಸಕ್ತರು 94805 83913 ದೂರವಾಣಿಯನ್ನು ಸಂಪರ್ಕಿಸಬಹುದು.

 

share
-ಕಾರುಣ್ಯಾ
-ಕಾರುಣ್ಯಾ
Next Story
X