ಉಳ್ಳಾಲ ಸಮಸ್ತ ಸಮ್ಮೇಳನದ ಪ್ರಚಾರ ಜಾಥಾಕ್ಕೆ ಚಾಲನೆ

ಮಂಗಳೂರು, ಮಾ.31: ಉಳ್ಳಾಲ ಕಡಲ ಕಿನಾರೆಯಲ್ಲಿ ಎ.7ರಂದು ನಡೆಯಲಿರುವ ಸಮಸ್ತ ಮಹಾಸಮ್ಮೇಳನದ ಪ್ರಚಾರಾರ್ಥ ರಾಜ್ಯಾದ್ಯಂತ ಸಂಚರಿಸಲಿರುವ ಪ್ರಚಾರ ಜಾಥಾಕ್ಕೆ ಸೈಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಚಾಲನೆ ನೀಡಿದರು.
ಸೈಯದ್ ಅಮೀರ್ ತಂಙಳ್ ಕಿನ್ಯಾ ಉಳ್ಳಾಲ ದರ್ಗಾ ಝಿಯಾರತ್‌ಗೆ ನೇತೃತ್ವ ನೀಡಿದರು. ಜಾಥಾ ನಾಯಕ ಇಬ್ರಾಹೀಂ ಬಾತಿಷ್ ತಂಙಳ್, ಝೈನ್ ಸಖಾಫಿ ಉಳ್ಳಾಲ, ತಬೂಕ್ ದಾರಿಮಿ, ಬಶೀರ್ ಇಸ್ಮಾಯೀಲ್, ಹಾಫಿಲ್ ನಈಮಿ, ಸಿದ್ದೀಕ್ ಅಬೂಬಕರ್ ಮತ್ತಿತರರು ಉಪಸ್ಥಿತರಿದ್ದರು.
Next Story





