ಮತದಾನ ಜಾಗೃತಿಗಾಗಿ ರಕ್ತದಾನ ಶಿಬಿರ: ದ.ಕ. ಜಿಲ್ಲಾ ಸ್ವೀಪ್ ಸಮಿತಿಯಿಂದ ವಿನೂತನ ಪ್ರಯೋಗ
ಮಂಗಳೂರು, ಮಾ.31: ರಾಜ್ಯ ವಿಧಾನಸಭಾ ಚುನಾವಣೆ ಪ್ರಯುಕ್ತ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ದ.ಕ. ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ರಕ್ತದಾನ ಶಿಬಿರ ಎ 4ರಂದು ಬೆಳಗ್ಗೆ 9 ಗಂಟೆಗೆ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ನಡೆಯಲಿದೆ.
ಜೀವ ಉಳಿಸಲು ರಕ್ತದಾನ- ದೇಶ ಉಳಿಸಲು ಮತದಾನ ಎಂಬ ಘೋಷವಾಕ್ಯದಡಿ ಈ ಶಿಬಿರ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದ.ಕ. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಎಂ.ಆರ್. ರವಿ ಮನವಿ ಮಾಡಿದ್ದಾರೆ.
ಚುನಾವಣೆ: ಜಿಲ್ಲೆಯಲ್ಲಿ 1790 ಮತಗಟ್ಟೆಗಳು
ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ 1790 ಮತಗಟ್ಟೆಗಳು ಕಾರ್ಯನಿರ್ವಹಿಸಲಿವೆ. ಅತಿ ಹೆಚ್ಚು ಮತಗಟ್ಟೆಗಳು ಬಂಟ್ವಾಳ ಕ್ಷೇತ್ರದಲ್ಲಿ (246) ಇದ್ದು, ಅತಿ ಕಡಿಮೆ ಅಂದರೆ ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ 200 ಬೂತ್‌ಗಳು ಇವೆ. ಉಳಿದಂತೆ ಬೆಳ್ತಂಗಡಿ-241, ಮೂಡುಬಿದಿರೆ -209, ಮಂಗಳೂರು ಉತ್ತರ-229, ಮಂಗಳೂರು ದಕ್ಷಿಣ-220, ಪುತ್ತೂರು-217 ಹಾಗೂ ಸುಳ್ಯದಲ್ಲಿ 228 ಮತಗಟ್ಟೆಗಳು ಇರಲಿವೆ.
ಜಿಲ್ಲೆಯಲ್ಲಿ ನಗರ/ಪಟ್ಟಣ ಪ್ರದೇಶಗಳ ಪ್ರತೀ ಮತಗಟ್ಟೆಯಲ್ಲಿ 1400ಕ್ಕೂ ಅಧಿಕ ಮತದಾರರಿರುವ 44 ಮತಗಟ್ಟೆಗಳಿವೆ. ಈ ಪೈಕಿ ಮಂಗಳೂರು ದಕ್ಷಿಣ-18 ಹಾಗೂ ಮಂಗಳೂರು ಉತ್ತರದಲ್ಲಿ 15 ಮತಗಟ್ಟೆಗಳಿವೆ.
ಅದೇ ರೀತಿ ಗ್ರಾಮಾಂತರ ಪ್ರದೇಶದಲ್ಲಿ 1300ಕ್ಕೂ ಅಧಿಕ ಮತದಾರರಿರುವ 27 ಮತಗಟ್ಟೆಗಳಿದ್ದು, ಈ ಪೈಕಿ ಮೂಡಬಿದ್ರೆ ಕ್ಷೇತ್ರದಲ್ಲಿ 10 ಹಾಗೂ ಮಂಗಳೂರು ಕ್ಷೇತ್ರದಲ್ಲಿ 8 ಮತಗಟ್ಟೆಗಳಿವೆ.
ಸುಗಮ ಚುನಾವಣೆ ಪ್ರಕ್ರಿಯೆಗೆ ಜಿಲ್ಲೆಯ ಪ್ರತೀ ವಿಧಾನಸಭಾ ಕ್ಷೇತ್ರಗಳಿಗೆ ವಿವಿಧ ತಂಡಗಳನ್ನು ರಚಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ, ಪ್ರಮುಖ ಜಂಕ್ಷನ್‌ಗಳಲ್ಲಿ, ಅಂತರ್ಜಿಲ್ಲಾ ಹಾಗೂ ಅಂತಾರಾಜ್ಯ ಗಡಿ ಪ್ರದೇಶಗಳ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸಲು ಹಾಗೂ ನಿಗಾ ವಹಿಸಲು ಜಿಲ್ಲೆಯಾದ್ಯಂತ 51 ತಂಡಗಳನ್ನು (ಎಸ್‌ಎಸ್‌ಟಿ) ರಚಿಸಲಾಗಿದೆ. ಪ್ರತೀ ತಂಡದಲ್ಲಿ ಮೂವರು ಸದಸ್ಯರಿರುತ್ತಾರೆ.
ಇದೇ ರೀತಿ ವಿವಿಧ ಕಾರ್ಯಕ್ರಮಗಳ ಹಾಗೂ ಸಭೆಗಳ ವೀಡಿಯೋ ಚಿತ್ರೀಕರಣ ನಡೆಸಲು 51 ತಂಡ ರಚಿಸಲಾಗಿದೆ. ಈ ತಂಡ ಚಿತ್ರೀಕರಿಸಿದ ವೀಡಿಯೋ ದೃಶ್ಯಗಳನ್ನು ವೀಕ್ಷಿಸಿ ವರದಿ ಸಲ್ಲಿಸಲು ಪ್ರತ್ಯೇಕವಾಗಿ 16 ತಂಡ ರಚಿಸಲಾಗಿದೆ. ಅದೇ ರೀತಿ ಅಧಿಕಾರಿಗಳ ನೇತೃತ್ವದಲ್ಲಿ 44 ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲಾಗಿದ್ದು, ಈ ತಂಡವು ವಿಧಾನಸಭಾ ಕ್ಷೇತ್ರಾದ್ಯಂತ ಸಂಚರಿಸಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಲಿದೆ.
ಇದಲ್ಲದೇ, ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ತಲಾ ಎರಡು ಅಕೌಂಟಿಂಗ್ ತಂಡಗಳನ್ನು ಹಾಗೂ ತಲಾ 2 ಸಹಾಯಕ ವೆಚ್ಚ ವೀಕ್ಷಕರನ್ನು ನೇಮಿಸಲಾಗಿದೆ.
ಚುನಾವಣೆ: ದೂರು ನೀಡಲು ಕಂಟ್ರೋಲ್ ರೂಂ
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರು ಅಥವಾ ಸಲಹೆಗಳನ್ನು ಸ್ವೀಕರಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ತೆರೆಯಲಾಗಿದೆ.
ನೀತಿ ಸಂಹಿತೆ ಉಲ್ಲಂಂಘನೆಗಳ ಬಗ್ಗೆ ದೂರು ನೀಡಲು ಅಥವಾ ಚುನಾವಣೆಗೆ ಸಂಬಂಧಪಟ್ಟ ಯಾವುದೇ ಮಾಹಿತಿಯನ್ನು ಇಲ್ಲಿಂದ ಪಡೆಯಬಹುದಾಗಿದೆ. ಸಾರ್ವಜನಿಕರು ದೂರವಾಣಿ ಸಂಖ್ಯೆ 0824 2420002 ಅಥವಾ ಟೋಲ್ ಫ್ರೀ ಸಂಖ್ಯೆ 1800 425 2099 ಸಂಪರ್ಕಿಸಬಹುದು. ಇದಲ್ಲದೇ ವೆಬ್‌ಸೈಟ್ www.deodk.com







