ಉಡುಪಿ: ವೃದ್ಧರು ನಾಪತ್ತೆ

ಉಡುಪಿ, ಮಾ.31: ಶಿರ್ವ ಗ್ರಾಮದ ಪಂಜಿಮಾರು ಮಾನಡ್ಕದ ನಿವಾಸಿ ಸುಮಾರು 78 ವರ್ಷ ಪ್ರಾಯದ ಭಾಸ್ಕರ ಹೆಗ್ಡೆ ಎಂಬವರು ಮಧುಮೇಹ, ರಕ್ತದೊತ್ತಡ ಹಾಗೂ ಉಬ್ಬಸ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು, ಮಾ.21ರಂದು ಬೆಳಗ್ಗೆ 7:30ಕ್ಕೆ ಕಟಪಾಡಿಗೆ ಮದ್ದಿಗೆಂದು ಹೋದವರು ವಾಪಾಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ನಾಪತ್ತೆಯಾಗಿರುವ ಭಾಸ್ಕರ ಹೆಗ್ಡೆ ಇವರು 5 ಅಡಿ 9ಇಂಚು ಎತ್ತರ, ಗೋಧಿ ಮೈಬಣ್ಣ , ದೃಡಕಾಯ ಶರೀರ, ಕೋಲುಮುಖ, ಕನ್ನಡ ,ತುಳು, ಹಿಂದಿ ಭಾಷೆ ಮಾತನಾಡುತ್ತಾರೆ. ಕ್ರಿಂ ಬಣ್ಣದ ಅರ್ಧತೋಳಿನ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಅಲ್ಲದೇ ಕೈಯಲ್ಲಿ ಸ್ಟೀಲ್ ಊರು ಕೋಲು ಇದ್ದು, ಕನ್ನಡಕ ಹಾಕಿರುತ್ತಾರೆ. ಹೊಟ್ಟೆಯ ಬಲಭಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡಿದ ಗುರುತು ಇದೆ.
ಕಾಣೆಯಾದ ಭಾಸ್ಕರ ಹೆಗ್ಡೆ ಬಗ್ಗೆ ಮಾಹಿತಿ ದೊರೆತಲ್ಲಿ ಸಹಾಯಕ ಪೊಲೀಸ್ ಅಧಿಕ್ಷಕರು, ಕಾರ್ಕಳ ಉಪವಿಭಾಗ, ಕಾರ್ಕಳ (08258-231333, 9480805421), ಪೊಲೀಸ್ ವೃತ್ತ ನಿರೀಕ್ಷಕರು ಕಾಪು ವೃತ್ತ ಕಚೇರಿ (0820-2552133, 9480805431) ಅಥವಾ ಶಿರ್ವ ಪೊಲೀಸ್ ಠಾಣೆ (0820-2554139, 9480805451)ಗೆ ಮಾಹಿತಿ ನೀಡುವಂತೆ ಪೊಲೀಸ್ ವೃತ್ತ ನಿರೀಕ್ಷಕರ ಪ್ರಕಟಣೆ ತಿಳಿಸಿದೆ.





