ಪುತೋನ್ಸೆ ಗ್ರಾಮಸ್ಥರಿಂದ ಮಾದಕ ದ್ರವ್ಯ ವ್ಯಸನ ವಿರೋಧಿ ಅಭಿಯಾನ
ಉಡುಪಿ, ಮಾ.31: ಪಡುತೋನ್ಸೆ ನಾಗರಿಕರ ಒಕ್ಕೂಟದ ವತಿಯಿಂದ ಮಾದಕ ದ್ರವ್ಯ ವ್ಯಸನ ವಿರೋಧಿ ಅಭಿಯಾನವನ್ನು ಎ.1ರಿಂದ 30ರವರೆಗೆ ಹಮ್ಮಿಕೊಳ್ಳಲಾಗಿದೆ.
ಈ ಅಭಿಯಾನದ ಮೂಲಕ ಕಾನೂನು ಮಾಹಿತಿ, ಆರೋಗ್ಯ ಮಾಹಿತಿ, ಮನೆ ಮನೆ ಭೇಟಿ, ಪೋಷಕರೊಂದಿಗೆ ಮಾತುಕತೆ, ಸಂವಾದ ಕಾರ್ಯಕ್ರಮ, ಬೀದಿ ನಾಟಕ, ಮೊಹಲ್ಲಾ ಸಭೆ, ಭಿತ್ತಿಪತ್ರ ವಿತರಣೆ, ತಜ್ಞ ವೈದ್ಯರಿಂದ ಕೌನ್ಸಿಲಿಂಗ್ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುವುದು.
ಈ ಪ್ರಯುಕ್ತ ಜನಜಾಗೃತಿ ಕಾರ್ಯಕ್ರಮವನ್ನು ಎ.2ರಂದು ಸಂಜೆ 4.45ಕ್ಕೆ ಹೂಡೆ ಉರ್ದು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ, ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ, ಡಾ.ಅಬ್ದುಲ್ ಸಮದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story





