ಹಿಂದಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ:ಸಿಬಿಎಸ್‌ಇ

ಹೊಸದಿಲ್ಲಿ,ಮಾ.31: ಹಿಂದಿ ಪ್ರಶ್ನೆಪತ್ರಿಕೆಯು ಸೋರಿಕೆ ಯಾಗಿದೆ ಎಂಬ ವದಂತಿಗಳನ್ನು ಸಿಬಿಎಸ್‌ಇ ಅಧ್ಯಕ್ಷೆ ಅನಿತಾ ಕರ್ವಾಲ್ ಅವರು ಶನಿವಾರ ತಳ್ಳಿಹಾಕಿದರು. ಇದಕ್ಕೂ ಮುನ್ನ ವಿದ್ಯಾರ್ಥಿಗಳು 12ನೇ ತರಗತಿಯ ಹಿಂದಿ ಪ್ರಶ್ನೆಪತ್ರಿಕೆಯೂ ಸೋರಿಕೆಯಾಗಿದೆ ಎಂದು ಆರೋಪಿಸಿ ಇಲ್ಲಿಯ ಸಿಬಿಎಸ್‌ಇ ಕಚೇರಿಯ ಎದುರು ಪ್ರತಿಭಟನೆಗಳನ್ನು ನಡೆಸಿದ್ದರು.
ವಿದ್ಯಾರ್ಥಿಗಳು ಪ್ರಸ್ತಾಪಿಸಿರುವ ಪತ್ರಿಕೆಯು 2017ನೇ ಸಾಲಿನ ಕಂಪಾರ್ಟ್‌ಮೆಂಟ್ ಪರೀಕ್ಷೆಯ ಪ್ರಶ್ನೆಪತ್ರಿಕೆಯಾಗಿದೆ. ಇದು ಖಂಡಿತವಾಗಿಯೂ ಕುಚೋದ್ಯದ ಕೃತ್ಯವಾಗಿದೆ. ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಗುಂಪು ತನ್ನ ಬಳಿ ಸೋರಿಕೆಯಾಗಿರುವ ಪ್ರಶ್ನೆಪತ್ರಿಕೆಯಿದೆ ಎಂದು ಹೇಳಿಕೊಂಡು ಅದನ್ನೂ ವಿತರಿಸುತ್ತಿದೆ ಎಂದು ಕರ್ವಾಲ್ ಸ್ಪಷ್ಟಪಡಿಸಿದರು.
ಹಿಂದಿ ಪರೀಕ್ಷೆಯು ಎ.2ರಂದು ನಡೆಯಲಿದೆ.
Next Story





