ನ್ಯುಮೋನಿಯಾ ಗುಣಪಡಿಸಲು 1 ತಿಂಗಳ ಮಗುವಿಗೆ ಆ್ಯಸಿಡ್ ಎರಚಿದ ಮಹಿಳೆ

ರಾಜಸ್ಥಾನ, ಮಾ. 31: ನ್ಯುಮೋನಿಯಾದಿಂದ ಗುಣಮುಖವಾಗಲು ಒಂದು ತಿಂಗಳ ಮಗುವಿಗೆ ಆ್ಯಸಿಡ್ ಎರಚಿದ ಘಟನೆ ರಾಜಸ್ಥಾನದ ಸವಾಯಿ ಮಧೋಪುರ ಜಿಲ್ಲೆಯಲ್ಲಿ ನಡೆದಿದೆ.
ಆ್ಯಸಿಡ್ ಎರಚಿದ ಮಹಿಳೆಯನ್ನು ಬಂಧಿಸಲಾಗಿದೆ.
ನ್ಯೂಮೋನಿಯಾ ಬಾಧಿತ ಮಗುವನ್ನು ಸಂಬಂಧಿಕರು ವಿನೋಭಾ ಬಸ್ತಿ ಅವರಲ್ಲಿ ಮಾರ್ಚ್ 26ರಂದು ಕರೆದುಕೊಂಡು ಹೋಗಿದ್ದರು. ಈ ಮಹಿಳೆ ಮಗುವಿನ ಅಸೌಖ್ಯ ನಿವಾರಿಸಲು ಆ್ಯಸಿಡ್ ಎರಚಿದ್ದಾರೆ. ಇದರಿಂದ ಮಗುವಿನ ಎದೆ, ಪಾದದ ಚರ್ಮಕ್ಕೆ ಹಾನಿ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವಿನ ಆರೋಗ್ಯ ಕ್ಷೀಣಿಸುತ್ತಿದ್ದಂತೆ ಸಮೀಪದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿಗೆ ಆದ ಗಾಯಗಳನ್ನು ಪರಿಶೀಲಿಸಿದ ವೈದ್ಯರು ಕೊಟ್ವಾಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಬಂಧಿಸಿದರು.
Next Story





