ಬಾವಿಗೆ ಬಿದ್ದು ಮೃತ್ಯು
ಕೋಟ, ಮಾ.31: ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಜಾವಳಿ ಜೆಡ್ಡು ಎಂಬಲ್ಲಿ ಮಾ.30 ರಂದು ಅಪರಾಹ್ನ ವೇಳೆ ನಡೆದಿದೆ.
ಮೃತರನ್ನು ಜಾವಳಿಜೆಡ್ಡುವಿನ ಕೃಷ್ಣ ನಾಯ್ಕ್(29) ಎಂದು ಗುರುತಿಸಲಾಗಿದೆ. ಇವರು ಮನೆಯ ಬಾವಿಯಿಂದ ನೀರನ್ನು ತೆಗೆಯಲು ರಾಟೆಯ ಹಗ್ಗ ಬಿಡಿಸು ತ್ತಿದ್ದು, ಈ ವೇಳೆ ಬಾವಿ ದಂಡೆಯ ಕಲ್ಲು ಜಾರಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆನ್ನಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





