ರೈಲಿನಲ್ಲಿ ಮಹಿಳೆಯ ಚಿನ್ನಾಭರಣಗಳ ಬ್ಯಾಗ್ ಕಳವು
ಮಣಿಪಾಲ, ಮಾ.31: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಚಿನ್ನಾಭರಣ ಸಹಿತ ಸಾವಿರಾರು ರೂ. ವೌಲ್ಯದ ಸೊತ್ತುಗಳಿದ್ದ ಬ್ಯಾಗ್ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಮಂಗಳೂರು ಎಂಆರ್‌ಪಿಎಲ್ ಟೌನ್‌ಶಿಪ್‌ನ ಅನಿಲ್ ಅಶೋಕ ಬಾಳಗಿ ಎಂಬವರು ತನ್ನ ಪತ್ನಿ ಹಾಗೂ ಮಗಳೊಂದಿಗೆ ಕುಮುಟಾದಿಂದ ಮಂಗಳೂರಿಗೆ ಮಡ್ಗಾಂವ್ ಮಂಗಳೂರು ಇಂಟರ್ಸಿಟಿ ರೈಲಿನಲ್ಲಿ ಮಾ.30ರಂದು ಪ್ರಯಾಣಿಸುತ್ತಿದ್ದು, ರಾತ್ರಿ 8 ಗಂಟೆಗೆ ರೈಲು ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ತಲುಪಿದಾಗ ಇವರ ಪತ್ನಿ ತನ್ನ ವೆನಿಟಿ ಬ್ಯಾಗ್‌ನ್ನು ಸೀಟಲ್ಲಿ ಇಟ್ಟು ಬಾತ್‌ರೂಮ್‌ಗೆ ಹೋಗಿದ್ದರು.
ಆ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ರೈಲಿನ ಒಳಗೆ ಬಂದು ವ್ಯಾನಿಟಿ ಬ್ಯಾಗ್ ಕಳವು ಮಾಡಿ ರೈಲಿನಿಂದ ಇಳಿದು ಕತ್ತಲಲ್ಲಿ ಪರಾರಿಯಾಗಿದ್ದಾನೆಂದು ದೂರ ಲಾಗಿದೆ. ಕಳವಾದ ವ್ಯಾನಿಟಿ ಬ್ಯಾಗಿನಲ್ಲಿ 3 ಪವನ್ ಕರಿಮಣಿ ಸರ, ಒಂದು ಟ್ಯಾಬ್, 800ರೂ. ನಗದು ಇದ್ದು, ಇವುಗಳ ಒಟ್ಟು ವೌಲ್ಯ 60ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





