ಮದುವೆಗೆ ನಿರಾಕರಿಸಿದ ವರನ ಮನೆಯೆದುರು ಧರಣಿ ಕುಳಿತಿದ್ದ ಯುವತಿ ಮೇಲೆ ಹಲ್ಲೆ

ಬೆಂಗಳೂರು,ಮಾ.31: ನಿಶ್ಚಿತಾರ್ಥದ ಬಳಿಕ ಮದುವೆಗೆ ನಿರಾಕರಿಸಿದ ವರನ ಮನೆಯೆದುರು ಧರಣಿ ಕುಳಿತಿದ್ದ ಯುವತಿ ಹಾಗೂ ಆಕೆಯ ತಂದೆ ಮೇಲೆ ಹಲ್ಲೆ ಮಾಡಿರುವ ಘಟನೆ ಬ್ಯಾಡರಹಳ್ಳಿಯಲ್ಲಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಬ್ಯಾಡರಹಳ್ಳಿಯ ಪುನೀತ್ ಎಂಬಾತ ತಾವರೆಕೆರೆ ಪಾಳ್ಯದ ಯುವತಿ ಜತೆ ಮಾ.26ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ. ಆದರೆ ಇತ್ತೀಚೆಗೆ ತನ್ನ ವರಸೆ ಬದಲಿಸಿ ಮದುವೆ ಬೇಡ ಎನ್ನುತ್ತಿದ್ದ. ಆದರೆ ಯುವತಿ ನ್ಯಾಯಕ್ಕಾಗಿ ಆತನ ಮನೆ ಎದುರು ಕಳೆದ ಒಂದು ವಾರದಿಂದ ಧರಣಿ ನಡೆಸುತ್ತಿದ್ದಳು. ಶುಕ್ರವಾರ ರಾತ್ರಿ ಯುವತಿ ಹಾಗೂ ಆಕೆಯ ತಂದೆ ಮೇಲೆ ಪುನೀತ್ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಕದಮೆ ದಾಖಲಾಗಿದೆ.
Next Story





