ಶ್ರೀವಾಗೀಶ ತೀರ್ಥರ ಆರಾಧನಾ ಪಂಚ ಶತಮಾನೋತ್ಸವ

ಉಡುಪಿ, ಎ.1: ಸೋದೆ ವಾದಿರಾಜ ಮಠ, ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಪಲಿಮಾರು ಮಠಗಳ ಸಂಯುಕ್ತ ಆಶ್ರಯದಲ್ಲಿ ಶ್ರೀವಾದಿರಾಜ ಗುರು ಸಾರ್ವಭೌಮರ ಆಶ್ರಮ ಗುರು ಶ್ರೀವಾಗೀಶ ತೀರ್ಥರ ಆರಾಧನಾ ಪಂಚ ಶತಮಾನೋತ್ಸವದ ಪ್ರಯುಕ್ತ ಜ್ಞಾನಯಜ್ಞವನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ರವಿವಾರ ರಾಜಾಂಗಣದಲ್ಲಿ ಉದ್ಘಾಟಿಸಿದರು.
ಬಳಿಕ ಆಶೀರ್ವಚನ ನೀಡಿದ ಅವರು, ಶ್ರೀವಾದಿರಾಜ ಗುರುಸಾರ್ವಭೌಮ ರನ್ನೇ ನಮಗೆ ನೀಡಿದ ಯತಿಪುಂಗವರು ಮತ್ತು ಮನಸ್ಸೆಂಬ ಮನೆಯ ಕೊಳೆ ಯನ್ನು ಪವಿತ್ರ ತೀರ್ಥದಂತಿರುವ ಮಧ್ವಾಚಾರ್ಯರ ವಿಶೇಷ ಆವೇಶಭರಿತ ರಾದ ವಾಗೀಶ ತೀರ್ಥರೇ ಪರಿಹರಿಸಿದರು. ಅವರ ಶಿಷ್ಯರಾದ ವಾದಿರಾಜರೇ ಪ್ರಾರ್ಥನೆ ಮಾಡಿ ವಾಗೀಶ ತೀರ್ಥರ ಮೇರು ವ್ಯಕ್ತಿತ್ವವನ್ನು ಸೂಚಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸೋದೆ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
Next Story





