ಯೂತ್ ರೆಡ್‌ಕ್ರಾಸ್ ಸಪ್ತಾಹ: ರಕ್ತದಾನ ಶಿಬಿರ

ಉಡುಪಿ, ಎ.1: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜಿನ ವತಿಯಿಂದ ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಘಟಕದ ಸಹಯೋಗದೊಂದಿಗೆ ಯೂತ್ ರೆಡ್‌ಕ್ರಾಸ್ ಸಪ್ತಾಹದ ಅಂಗವಾಗಿ ರಕ್ತದಾನ ಶಿಬಿರವನ್ನು ಇತ್ತೀಚೆಗೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ರಕ್ತದಾನ ನಿಧಿ ಘಟಕದ ಅಧಿಕಾರಿ ಡಾ.ವೀಣಾ ರಕ್ತದಾನದ ಮಹತ್ವ ಮತ್ತು ವಿಧಾನದ ಕುರಿತು ವಿವರಿಸಿದರು. ಪ್ರಾಧ್ಯಾಪಕಿ ಡಾ.ಮಮತಾ ಕೆ.ವಿ. ರಕ್ತದಾನ ಶಿಬಿರದ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು.
ಯೋಜನಾಧಿಕಾರಿ ಡಾ.ಶ್ರೀಲತಾ ಕಾಮತ್, ಡಾ.ಸುಧೀಂದ್ರ ಹೊನವಾಡ, ಸಹಕರಿಸಿದರು. ಶಿಬಿರದಲ್ಲಿ 120 ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ರಕ್ತದಾನ ಮಾಡಿದರು.
Next Story





