ಕುವೈತ್‌ನಲ್ಲಿ ಅಪಘಾತ: 7 ಭಾರತೀಯರು ಸೇರಿ 15 ಮಂದಿ ಮೃತ್ಯು

ಕುವೈತ್ ಸಿಟಿ, ಎ. 1: ದಕ್ಷಿಣ ಕುವೈತ್‌ನಲ್ಲಿ ರವಿವಾರ ಎರಡು ಬಸ್‌ಗಳ ನಡುವೆ ನಡೆದ ಮುಖಾಮುಖಿ ಢಿಕ್ಕಿಯಲ್ಲಿ 15 ತೈಲ ಕಂಪೆನಿಗಳ ಕಾರ್ಮಿಕರು ಮೃತಪಟ್ಟಿದ್ದಾರೆ.
ಮೃತರಲ್ಲಿ 7 ಮಂದಿ ಭಾರತೀಯರು, ಐವರು ಈಜಿಪ್ಟಿಯನ್ನರು ಹಾಗೂ ಇತರ ಮೂವರು ಪಾಕಿಸ್ತಾನೀಯರು ಎಂದು ಸರಕಾರಿ ಒಡೆತನದ ಕುವೈತ್ ಆಯಿಲ್ ಕಂಪೆನಿ (ಕೆಒಸಿ)ಯ ಅಧಿಕಾರಿಯೊಬ್ಬರು ತಿಳಿಸಿದರು.
ಅಪಘಾತದಲ್ಲಿ ಇಬ್ಬರು ಭಾರತೀಯರು ಮತ್ತು ಓರ್ವ ಕುವೈತಿ ಪ್ರಜೆ ಗಾಯಗೊಂಡಿದ್ದಾರೆ.
ಅವರೆಲ್ಲರೂ ಬರ್ಗನ್ ಡ್ರಿಲ್ಲಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದರು.
Next Story





