ಒಡಿಶಾ ಸಾಂಸ್ಕೃತಿಕ ಸಂಘಟನೆಯಿಂದ ಉತ್ಕಲ್ ದಿನಾಚರಣೆ

ಮಂಗಳೂರು, ಎ.1: ಮಂಗಳೂರು ಒಡಿಯಾ ಸಾಂಸ್ಕೃತಿಕ ಸಂಘಟನೆಯ ವತಿಯಿಂದ ನಗರದ ರೋಟರಿ ಭನವದಲ್ಲಿ ಉತ್ಕಲ್ ದಿನಾಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮಂಗಳೂರು -ಒಡಿಶಾ ಪ್ರದೇಶದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಮಣಿಪಾಲ ವಿಶ್ವ ವಿದ್ಯಾನಿಲಯದ ಪೊ.ಡಾ.ರಮೇಶ್ ಚಂದ್ರ ಸಾಹು, ಇಂಡಿಯನ್ ಎಸೋಸಿಯೇಶಣ್ ಆಫ್ ಪಿಸಿಯೊಥೆರಪಿಯ ಅಧ್ಯಕ್ಷ ಡಾ.ಉಮಾ ಶಂಕರ್ ಮೊಹಂತಿ, ಮಂಗಳೂರು ವಿಶೇಷ ವಿತ್ತ ವಲಯದ ಮುಖ್ಯ ಹಣಕಾಸು ಅಧಿಕಾರಿ ಗೌರಂಗ್ ಸ್ವಾಯಿನ್, ಕಾರ್ಪೋರೇಶನ್ ಬ್ಯಾಂಕ್‌ನ ಡಿ ಜಿಎಂ ಶಂತನು ಕುಮಾರ್ ದಾಸ್, ನ್ಯೂ ಇಂಡಿಯಾ ಎಕ್ಸ್‌ಪ್ರೆಸ್ ನ ಮಂಗಳೂರು ವಿಭಾಗದ ವ್ಯವಸ್ಥಾಪಕರಾದ ಸುಬ್ರತ್ ಕುಮಾರ್ ದಾಸ್, ಏರ್ ಇಂಡಿಯಾ ಸರ್ವಿಸ್ ಮ್ಯಾನೇಜರ್ ಸರಭೇಶ್ವರ ಮಲ್ಲ, ಅಂಬುಜ ಸಿಮೆಂಟ್‌ನ ಸಹಾಯಕ ವ್ಯವಸ್ಥಾಪಕ ಗೋಪಾಲ ಕೃಷ್ಣ ಸಾಹು , ಎನ್‌ಐಟಿಕೆಯ ಸುರತ್ಕಲ್‌ನ ವಿಜ್ಞಾನ ವಿಭಾಗದ ಸಹಾಯಕರಾದ ಡಾ.ದೇಬಾಶೀಸ್ ಜಿನಾ , ಡಾ.ಬಿಜೈ ಮಿಹೀರ್ ಕುಮಾರ್, ಎನ್‌ಎಂಪಿಟಿಯ ಉಪ ಸಂರಕ್ಷಣಾಧಿಕಾರಿ ಕ್ಯಾ.ಸೌಭಾಗ್ಯ ರಂಜನ್, ಭಾರತೀ ಶೀಪ್ ಯಾರ್ಡ್‌ನ ಇಂಜಿನಿಯರ್ ಡಾ.ಕಿಶೋರ್ ಮಹೋರಾನಾ ಮೊದಲಾದವರು ಉಪಸ್ಥಿತರಿದ್ದರು.
ಕಲ್ಯಾಣಿ ಮೊಹಂತಿ ಕಾರ್ಯಕ್ರಮ ನಿರೂಪಿಸಿದರು.





