ಪೊಲೀಸ್ ಕೇಂದ್ರ ಕಚೇರಿಯಿಂದ 56 ಪಿಸ್ತೂಲು ನಾಪತ್ತೆ: ಎನ್ಐಎಯಿಂದ ತನಿಖೆ

ಸಾಂದರ್ಭಿಕ ಚಿತ್ರ
ಇಂಫಾಲ, ಎ. 1: ಪೊಲೀಸ್ ಕೇಂದ್ರ ಕಚೇರಿಯಿಂದ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 56 ಪಿಸ್ತೂಲ್ ಹಾಗೂ 58 ಮ್ಯಾಗಝಿನ್ಗಳು ನಾಪತ್ತೆಯಾಗಿರುವ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸಲಿದೆ ಎಂದು ಮಣಿಪುರ ಸರಕಾರ ಶನಿವಾರ ಹೇಳಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಎನ್. ಬೈರೇನ್ ಸಿಂಗ್, ರಾಷ್ಟ್ರೀಯ ತನಿಖಾ ಸಂಸ್ಥೆಗೆ ಶುಕ್ರವಾರ ಪತ್ರ ಕಳುಹಿಸಲಾಗಿದೆ ಎಂದಿದ್ದಾರೆ.
ಈ ವಿಷಯ ದೇಶದ ಭದ್ರತೆಗೆ ಸಂಬಂಧಿಸಿದ್ದು ಹಾಗೂ ಕೂಲಂಕಷ ತನಿಖೆಯ ಅಗತ್ಯವಿದೆ ಎಂದು ಬೈರೇನ್ ಸಿಂಗ್ ಹೇಳಿದ್ದಾರೆ. ಗೃಹ ಇಲಾಖೆಯ ಉಸ್ತುವಾರಿಯನ್ನೂ ವಹಿಸಿಕೊಂಡಿರುವ ಸಿಂಗ್, ಇಂಫಾಲದ 2ನೇ ಮಣಿಪುರ ರೈಫಲ್ಸ್ನ ಕೇಂದ್ರಕಚೇರಿಯ ಶಸ್ತ್ರಾಗಾರದಿಂದ 2014 ಹಾಗೂ 2018ರ ನಡುವೆ 56 ಅಟೋ ಎಂಎಂ ಪಿಸ್ತೂಲ್ ಹಾಗೂ 58 ಮ್ಯಾಗಝಿನ್ ನಾಪತ್ತೆಯಾಗಿದೆ ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ 2ನೇ ಮಣಿಪುರ ರೈಫಲ್ಸ್ನ ಇಬ್ಬರು ಉದ್ಯೋಗಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Next Story





