ರಶ್ಯ ರಾಜತಾಂತ್ರಿಕರ ಮೊದಲ ತಂಡ ಅಮೆರಿಕದಿಂದ ವಾಪಸ್

ಮಾಸ್ಕೊ, ಎ. 1: ಅಮೆರಿಕ ಉಚ್ಚಾಟಿಸಿದ ರಶ್ಯ ರಾಜತಾಂತ್ರಿಕರನ್ನು ಒಳಗೊಂಡ ಮೊದಲ ವಿಮಾನ ರವಿವಾರ ಮಾಸ್ಕೊದ ವನುಕೊವೊ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ಈ ವಿಮಾನದಲ್ಲಿ 46 ರಾಜತಾಂತ್ರಿಕರು ಮತ್ತು ಅವರ ಕುಟುಂಬ ಸದಸ್ಯರು ರಶ್ಯಕ್ಕೆ ವಾಪಸಾದರು ಎಂದು ರಶ್ಯದ ಸರಕಾರಿ ಸುದ್ದಿ ಸಂಸ್ಥೆ ‘ಟಾಸ್’ ವರದಿ ಮಾಡಿದೆ.
ಬ್ರಿಟನ್‌ನ ಸ್ಯಾಲಿಸ್‌ಬರಿಯಲ್ಲಿ ರಶ್ಯದ ಮಾಜಿ ಬೇಹುಗಾರನೊಬ್ಬನಿಗೆ ವಿಷಪ್ರಾಶನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕವು ರಶ್ಯದ ರಾಜತಾಂತ್ರಿಕರನ್ನು ಉಚ್ಚಾಟಿಸಿರುವುದನ್ನು ಸ್ಮರಿಸಬಹುದಾಗಿದೆ.
ಇನ್ನೊಂದು ವಿಮಾನವು ರವಿವಾರ ತಡವಾಗಿ ರಶ್ಯ ರಾಜಧಾನಿಯನ್ನು ತಲುಪುವ ನಿರೀಕ್ಷೆಯಿದೆ.
Next Story





