Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..!

ಓ ಮೆಣಸೇ..!

ಪಿ.ಎ.ರೈಪಿ.ಎ.ರೈ2 April 2018 12:08 AM IST
share

ಬುದ್ಧಿ ಜೀವಿಗಳಿಂದ ದೇಶ ಹಾಳಾಗಿದೆ - ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ

►ತಮ್ಮನ್ನು ತಾವು ಬುದ್ಧಿ ಇಲ್ಲದ ಜೀವಿ ಎಂದು ಕರೆದುಕೊಳ್ಳುತ್ತಿದ್ದೀರಿ.

---------------------

ನರೇಂದ್ರ ಮೋದಿ ಒಬ್ಬ ಶೋಮ್ಯಾನ್ - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

►ವಿರೋಧ ಪಕ್ಷಗಳ ವೈಫಲ್ಯಗಳ ಲಾಭ ಪಡೆದಿದ್ದಾರೆ ಅಷ್ಟೇ.

---------------------

ಬಿಳಿಯರ ಮುಂದೆ ಬೆತ್ತಲಾಗಲು ನಮಗೆ ಹಿಂಜರಿಕೆಯಿಲ್ಲ - ಕೆ.ಜೆ.ಅಲ್ಫೋನ್ಸ್, ಕೇಂದ್ರ ಸಚಿವ

►ಅದಕ್ಕಾಗಿ ನಾವು ದೇಶದೊಳಗೆ ಬಟ್ಟೆ ಹಾಕಿಕೊಳ್ಳಲೇಬಾರದೆ?

---------------------

ಯಶಸ್ಸು ಸಾಧಿಸಬೇಕೆಂದರೆ ಶ್ರೀಮಂತ ಕುಟುಂಬದಲ್ಲೇ ಜನಿಸಬೇಕಿಲ್ಲ - ನರೇಂದ್ರ ಮೋದಿ, ಪ್ರಧಾನಿ

►ಅಂಬಾನಿಯಂತಹ ಶ್ರೀಮಂತರ ಚೇಲ ಆದರೂ ಸಾಕು ಅಂತೀರಾ?

---------------------

ಸಮಾಜದಿಂದ ಪಡೆದುಕೊಂಡದ್ದನ್ನು ಕಿಂಚಿತ್ತಾದರೂ ಮರಳಿಸೋಣ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

►ಸಮಾಜದಿಂದ ಕಿತ್ತುಕೊಂಡದ್ದನ್ನು ಒಪ್ಪಿಕೊಂಡಂತಾಯಿತು.

---------------------

ಚುನಾವಣೆ ಮತ್ತು ಯುದ್ಧಕ್ಕೆ ಹೆಚ್ಚಿನ ವ್ಯತ್ಯಾಸವಿಲ್ಲ - ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ

► ಅದಕ್ಕಾಗಿಯೇ ಸೇನೆಯನ್ನು ದುರ್ಬಳಕೆ ಮಾಡುತ್ತಿದ್ದೀರಿ ಎಂದಾಯಿತು.

---------------------

ಕಾಂಗ್ರೆಸ್ ತೇಲಲೂ ಆಗದ ಮುಳುಗಲೂ ಆಗದ ಪರಿಸ್ಥಿತಿಯಲ್ಲಿದೆ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

►ಸಂಪೂರ್ಣ ಮುಳುಗಿದವರ ಪರಿಸ್ಥಿತಿಗಿಂತ ವಾಸಿ.

---------------------

ಬಾಯ್‌ಫ್ರೆಂಡ್ ಇಲ್ಲದಿದ್ದರೆ ಹುಡುಗಿಯರು ಸುರಕ್ಷಿತವಾಗಿರುತ್ತಾರೆ - ಪನ್ನಾಲಾಲ್ ಶಾಕ್ಯ, ಮಧ್ಯಪ್ರದೇಶ ಶಾಸಕ

►ಜಗತ್ತಿನಲ್ಲಿ ಗಂಡಸರ ಅಸ್ತಿತ್ವವೇ ಇಲ್ಲದಿದ್ದರೆ ಹುಡುಗಿಯರು ಸಂಪೂರ್ಣ ಸುರಕ್ಷಿತರು ಎಂದು ಹೇಳಲಿಲ್ಲ, ಪುಣ್ಯ.

---------------------

ವ್ಯಾಪಾರಿಯೊಬ್ಬ ಅಧಿಕಾರಕ್ಕೆ ಬಂದರೆ ಪ್ರಜೆಗಳು ಭಿಕಾರಿಯಾಗುತ್ತಾರೆ - ಸಿ.ಎಂ.ಇಬ್ರಾಹೀಂ, ಕಾಂಗ್ರೆಸ್ ನಾಯಕ

► ತಮ್ಮ ವ್ಯಾಪಾರ ಕಾಂಗ್ರೆಸ್‌ನೊಳಗೆ ಕುದುರಿದ ಲಕ್ಷಣಗಳು ಕಾಣುತ್ತಿವೆ.

---------------------

ರಾಹುಲ್ ಗಾಂಧಿಗೆ ರಾಜಕೀಯ ಜ್ಞಾನವಿಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

►ತಮ್ಮ ಮೊಮ್ಮಗ ರಾಜಕೀಯದಲ್ಲಿ ಪಿಎಚ್‌ಡಿ ಮಾಡಿರಬೇಕಲ್ಲ?

---------------------

ಧರ್ಮ ಒಡೆಯುವವರು ಪಾಕಿಸ್ತಾನದ ಏಜೆಂಟರು - ಡಾ.ಚನ್ನಸಿದ್ದರಾಮಶ್ರೀ, ಶ್ರೀಶೈಲ ಪೀಠ

► ಕುದುರೆಯೇರಿದ್ದಕ್ಕೆ ದಲಿತರನ್ನು ಕೊಲ್ಲುವವರು ಯಾರ ಏಜೆಂಟರು?

---------------------

ವೀರಶೈವರು ಸಂಘ ಅಥವಾ ಲಿಂಗ ಒಂದನ್ನು ಆಯ್ಕೆ ಮಾಡಿಕೊಳ್ಳಲಿ - ಡಾ.ಚಂದ್ರಶೇಖರ ಪಾಟೀಲ, ಸಾಹಿತಿ

►ಅವರಿಗೆ ಸಂಘದೊಳಗಿರುವ ಲಿಂಗವೇ ಇಷ್ಟವಂತೆ.

---------------------

ಬಿಜೆಪಿಯ ಮೂಲ ಬೇರು ಸುಳ್ಯದಲ್ಲಿದೆ - ಡಾ.ತೇಜಸ್ವಿನಿ ರಮೇಶ್, ಬಿಜೆಪಿ ವಕ್ತಾರೆ

► ಈ ಬಾರಿ ಸುಳ್ಯದ ಗೌಡರು ಆ ಬೇರನ್ನು ಹುಡುಕಿ ಬುಡದಿಂದಲೇ ಕಿತ್ತು ನಿಮ್ಮ ಕೈಗಿಡಲಿದ್ದಾರೆ.

---------------------

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗಲಿದೆ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ

► ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ರೈತರ ಹತ್ಯೆ ನಡೆದದ್ದೇ ಜಾಸ್ತಿ.

---------------------

ಅನಗತ್ಯ ಟೀಕೆಗಳಿಂದ ಬಿಜೆಪಿ ಗಟ್ಟಿಗೊಳ್ಳುತ್ತದೆ - ಕೋಟ ಶ್ರೀನಿವಾಸ ಪೂಜಾರಿ, ವಿ.ಪ.ಸದಸ್ಯ

►ಅದಕ್ಕೇ ಪಕ್ಷದೊಳಗಿನ ನಾಯಕರೇ ಬಿಜೆಪಿಯ ಟೀಕೆಗೆ ಇಳಿದಿರುವುದು.

---------------------

ಯಡಿಯೂರಪ್ಪ ಅಪರಾಧಿ ಅಲ್ಲ, ಜಾಮೀನು ಸಿಗದ ಕಾರಣ ಜೈಲಿನಲ್ಲಿದ್ದರು - ಸಿ.ಟಿ.ರವಿ, ಶಾಸಕ

► ಜಾಮೀನು ಸಿಗದಷ್ಟು ದೊಡ್ಡ ತಪ್ಪು ಮಾಡಿದ್ದಾರೆ ಎಂದಾಯಿತು.

---------------------

ದೇವೇಗೌಡರ ಆಡಳಿತದ ಬಗ್ಗೆ ಪುಸ್ತಕವೇ ಇದೆ - ಎಚ್.ಡಿ. ರೇವಣ್ಣ , ಮಾಜಿ ಸಚಿವ

►ಯಾವ ವಿಶ್ವವಿದ್ಯಾನಿಲಯದಲ್ಲಿ ಎನ್ನುವುದನ್ನೂ ಹೇಳಿ ಬಿಡಿ.

---------------------

ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ದಿನಗಣನೆ ಆರಂಭವಾಗಿದೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

► ಯಡಿಯೂರಪ್ಪ ಮುಕ್ತ ಬಿಜೆಪಿಗಾಗಿ ರಾಷ್ಟ್ರಮಟ್ಟದಲ್ಲಿ ಅಮಿತ್ ಶಾ ಯೋಜನೆ ರೂಪಿಸಿದ್ದಾರಂತೆ.

---------------------

ಎಸ್ಪಿ-ಬಿಎಸ್ಪಿ ಮೈತ್ರಿಯಲ್ಲಿ ಒಡಕು ಮೂಡಿಸಲು ಬಿಜೆಪಿ ಎಲ್ಲ ರೀತಿಯ ಸಂಚು ರೂಪಿಸುತ್ತಿದೆ - ಅಖಿಲೇಶ್ ಯಾದವ್, ಎಸ್ಪಿ ಮುಖ್ಯಸ್ಥ

► ನೀವು ಒಗ್ಗಟ್ಟಾದ ಆನಂತರವಲ್ಲವೆ ಒಡಕು ಮೂಡಿಸುವ ಮಾತು.

---------------------

ಇಡೀ ದೇಶವೇ ಒಂದು ಕುಟುಂಬ ಎಂಬ ಕಲ್ಪನೆ ನಮ್ಮದು - ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ

►ದೇಶವನ್ನು ಒಡೆದು ಸಣ್ಣ ಸಣ್ಣ ಕುಟುಂಬ ಮಾಡುವುದು ಆರೆಸ್ಸೆಸ್‌ನ ಸದ್ಯದ ಯೋಜನೆಯೇ?

---------------------

ರಾಹುಲ್ ಗಾಂಧಿ ‘ಪಾಪ ಪಾಂಡು’ ಇದ್ದಂತೆ - ಎಚ್.ವಿಶ್ವನಾಥ್, ಜೆಡಿಎಸ್ ಮುಖಂಡ

► ಪಾಪಿ ಪಾಂಡು ಆಗುವುದಕ್ಕಿಂತ ವಾಸಿ.

---------------------

ನಾನು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ - ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

►ಆಸೆಯೇ ದುಃಖಕ್ಕೆ ಕಾರಣ, ಬುದ್ಧನ ಮಾತು ಕೇಳಿಲ್ಲವೇ? ಮೊದಲು ವಿಧಾನಸಭೆಗೆ ಚುನಾವಣೆಗೆ ನಿಂತು ಗೆಲ್ಲಿ

---------------------

ಮೋದಿಗಿಂತಲೂ ಮೊದಲು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅನುಭವ ನನಗಿದೆ - ಚಂದ್ರ ಬಾಬು ನಾಯ್ಡು, ಆಂಧ್ರ ಮುಖ್ಯಮಂತ್ರಿ

► ಆದರೆ ಮುಖ್ಯಮಂತ್ರಿಯಾಗಿ ಹತ್ಯಾಕಾಂಡಕ್ಕೆ ಅವಕಾಶ ನೀಡಿದ ಅನುಭವ ನಿಮಗಿದೆಯೇ?

---------------------

ಬಿಜೆಪಿಯನ್ನು ಸೋಲಿಸಲು ಎಲ್ಲ ವಿರೋಧ ಪಕ್ಷಗಳು ಒಗ್ಗೂಡಬೇಕು - ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

► ಸೋಲಿಸಿದ ಬಳಿಕ ಕಚ್ಚಾಡೋಣ ಅಂತೀರಾ?

---------------------

ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯವನ್ನು ತುಂಬುವ ಕಾರ್ಯವನ್ನು ಬಿಜೆಪಿ ನಾಯಕರು ಮಾಡಬೇಕು - ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ

► ಅನೈತಿಕ ಸ್ಥೈರ್ಯವನ್ನಷ್ಟೇ ಅವರು ತುಂಬಬಲ್ಲರು.

---------------------

ಈಶ್ವರಪ್ಪ - ಯಡಿಯೂರಪ್ಪ ಅಣ್ಣ-ತಮ್ಮಂದಿರಂತೆ -ಮುರುಳೀಧರರಾವ್, ಬಿಜೆಪಿ ರಾಜ್ಯ ಉಸ್ತುವಾರಿ

►ಯಾರು ಅಣ್ಣ, ಯಾರು ತಮ್ಮ ಎನ್ನುವ ವಿಷಯಗಳಲ್ಲಿ ಜಗಳವಿದೆಯಂತೆ.

---------------------

ಟಿಕೆಟ್ ಸಿಗದಿದ್ದರೆ ಪಕ್ಷದ ಗೆಲುವಿಗೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ

► ಯಾವ ಪಕ್ಷದ ಗೆಲುವಿಗೆ?

---------------------

share
ಪಿ.ಎ.ರೈ
ಪಿ.ಎ.ರೈ
Next Story
X