2011ರ ವಿಶ್ವಕಪ್‌ನಲ್ಲಿ ಧೋನಿ ಬಳಸಿದ್ದ ಬ್ಯಾಟ್ ಅತ್ಯಂತ ದುಬಾರಿ!

ಹೊಸದಿಲ್ಲಿ, ಎ.2: ಮುಂಬೈನಲ್ಲಿ ನಡೆದ 2011ರ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಸಿಕ್ಸರ್ ಸಿಡಿಸಿ ಗೆಲುವಿನ ರನ್ ದಾಖಲಿಸಲು ಭಾರತದ ನಾಯಕ ಎಂ.ಎಸ್. ಧೋನಿ ಬಳಸಿದ್ದ ಬ್ಯಾಟ್ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗಿತ್ತು.
ವಿಶ್ವಕಪ್ ಕೊನೆಗೊಂಡ ಮೂರು ತಿಂಗಳ ಬಳಿಕ ಲಂಡನ್‌ನಲ್ಲಿ ದೇಣಿಗೆ ಸಂಗ್ರಹಕ್ಕಾಗಿ ನಡೆದ ಔತಣಕೂಟದಲ್ಲಿ ಧೋನಿಯ ಬ್ಯಾಟ್‌ನ್ನು ಮುಂಬೈ ಮೂಲದ ಹೂಡಿಕೆದಾರ ಸಂಸ್ಥೆ ಆರ್‌ಕೆ ಗ್ಲೋಬಲ್ 100,000 ಪೌಂಡ್(ಆಗ 72 ಲಕ್ಷ ರೂ.)ನೀಡಿ ಖರೀದಿಸಿತ್ತು. ಈ ಹಣವನ್ನು ಧೋನಿ ಪತ್ನಿಯ ದತ್ತಿ ಸಂಸ್ಥೆಗೆ ನೀಡಲಾಗಿದೆ.
Next Story





