ನಟ ಗಣೇಶ್‌ಗೆ 75 ಲಕ್ಷ ರೂ. ಪರಿಹಾರ ನೀಡಲು ಮೋಕ್ಷ ಅಗರಬತ್ತಿ ಸಂಸ್ಥೆಗೆ ಕೋರ್ಟ್ ಆದೇಶ

ಬೆಂಗಳೂರು, ಎ.2: ಕನ್ನಡ ಚಲನಚಿತ್ರ ನಟ ಗಣೇಶ್ ಅವರ ಅನುಮತಿ ಇಲ್ಲದೆ ಫೋಟೋ ಬಳಸಿಕೊಂಡಿದ್ದ ಅಗರಬತ್ತಿ ಸಂಸ್ಥೆಯೊಂದಕ್ಕೆ ಸಿಟಿ ಸಿವಿಲ್ ಕೋರ್ಟ್ ಬರೋಬ್ಬರಿ 75 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿದೆ.
10 ವರ್ಷಗಳ ಕಾಲ ನಡೆದ ವಿಚಾರಣೆಗೆ ಸೋಮವಾರ ತೆರೆ ಬಿದ್ದಿದ್ದು, ಗಣೇಶ್‌ಗೆ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.
ಮೋಕ್ಷ ಅಗರಬತ್ತಿ ಕಂಪೆನಿ ಚೆಲುವಿನ ಚಿತ್ತಾರ ಚಿತ್ರದ ತಮ್ಮ ಪೋಸ್ಟರ್ ಬಳಸಿಕೊಂಡಿದೆ ಎಂದು ಆರೋಪಿಸಿ 2008ರಲ್ಲಿ ಗಣೇಶ್ ಕೋರ್ಟ್ ಮೆಟ್ಟಿಲೇರಿದ್ದರು. ಜಾಹೀರಾತು ರೂಪದಲ್ಲಿ ಗಣೇಶ್ ಫೋಟೋ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ನಟ ಗಣೇಶ್‌ಗೆ ಪರಿಹಾರವಾಗಿ 75 ಲಕ್ಷ ರೂ. ನೀಡುವಂತೆ ಮೋಕ್ಷ ಕಂಪೆನಿಗೆ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.
ಈ ವಿಚಾರವಾಗಿ ನಿರ್ದೇಶಕರಾದ ಎಸ್. ನಾರಾಯಣ್ ಹಾಗೂ ಗಣೇಶ್ ಮಧ್ಯೆ ವಿವಾದಕ್ಕೂ ಕಾರಣವಾಗಿತ್ತು. ಈ ಸಂಬಂಧ ಎಸ್. ನಾರಾಯಣ್ ಕೋರ್ಟ್‌ನ ವಿಚಾರಣೆ ವೇಳೆ ಹಾಜರಾಗಿ ಹೇಳಿಕೆ ಸಹ ದಾಖಲಿಸಿದ್ದರು.
Next Story





