Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ:...

ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ: ಮಾತೆ ಮಹಾದೇವಿ

'ಚಕ್ರವರ್ತಿ ಸೂಲಿಬೆಲೆಗೆ ಮತೀಯ ಭ್ರಾಂತಿ ತಲೆಗೇರಿದೆ'

ವಾರ್ತಾಭಾರತಿವಾರ್ತಾಭಾರತಿ2 April 2018 9:23 PM IST
share
ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ: ಮಾತೆ ಮಹಾದೇವಿ

ಕೂಡಲಸಂಗಮ,ಎ.02: ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಲಿಂಗಾಯತ ಪ್ರತ್ಯೇಕ ಧರ್ಮ ಮತ್ತು ಲಿಂಗಾಯತರು ಧಾರ್ಮಿಕ ಅಲ್ಪ ಸಂಖ್ಯಾತರು ಎಂದು, ಮಾರ್ಚ್ 23 ರಂದು ಕೈಗೊಂಡ ನಿರ್ಣಯವನ್ನು ಶಿಫಾರಸು ಮಾಡಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂಬುದನ್ನು ಅಲ್ಲಗಳೆದು ಕೇಂದ್ರಕ್ಕೆ ಅದು ತಲುಪಿಲ್ಲ ಎಂದು ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸರ್ಕಾರದ ಮೇಲೆ ಗೂಬೆ ಕೂರಿಸಲು ನೀಡಿರುವ ಹೇಳಿಕೆ. ಇದು ಸತ್ಯವಲ್ಲ ಎಂದು ಕೂಡಲಸಂಗಮ ಬಸವಧರ್ಮಪೀಠದ ಪೀಠಾಧ್ಯಕ್ಷೆ ಮಹಾ ಜಗದ್ಗುರು ಮಾತೆಮಹಾದೇವಿ ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಧಾರ್ಮಿಕ ಅಲ್ಪ ಸಂಖ್ಯಾತರ ಕಾರ್ಯಾಲಯಕ್ಕೆ ಕರ್ನಾಟಕ ಸರ್ಕಾರದ ಶಿಫಾರಸು ತಲುಪಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಆ ಶಿಫಾರಸು ತಲುಪಿದ ಸಮಯದಲ್ಲಿ ಬಸವಧರ್ಮ ಪೀಠದ ಬಸವ ಕುಮಾರಸ್ವಾಮಿಗಳು ಕೇಂದ್ರದ ಕಾರ್ಯಾಲಯದಲ್ಲಿಯೇ ಕುಳಿತಿದ್ದರು. ಲೋಕಸಭೆಯಲ್ಲಿ ನಳಿನ್‌ ಕುಮಾರ್ ಕಟೀಲ್‌ರವರು, ಶಿಫಾರಸು ಕರ್ನಾಟಕ ಸರ್ಕಾರದಿಂದ ಬಂದಿರುವ ಬಗ್ಗೆ ಪ್ರಶ್ನಿಸಿದಾಗ ಧಾರ್ಮಿಕ ಅಲ್ಪಸಂಖ್ಯಾತ ಖಾತೆಯ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಮಾರ್ಚ್ 28 ರಂದು ಉತ್ತರಿಸುತ್ತಾ, ಶಿಫಾರಸು ಮಾರ್ಚ್ 26 ರಂದು ತಲುಪಿದೆ ಎಂದು ಹೇಳಿದ್ದಾರೆ.

ಕರ್ನಾಟಕ ಸರ್ಕಾರದಿಂದ ಕೇಂದ್ರಕ್ಕೆ ಯಾವ ಪ್ರಸ್ತಾವನೆಯೂ ಬಂದಿಲ್ಲ ಎಂಬುದು ಎಷ್ಟು ಸತ್ಯ ? ಲಿಂಗಾಯತ ಧರ್ಮ ಪ್ರತ್ಯೇಕವಾಗಲು ಸಾಧ್ಯವಿಲ್ಲ ಎಂದು ಯಾವ ದಾಖಲೆಯನ್ನೂ ಪರಿಶೀಲಿಸದೆ ಪೂರ್ವಾಗ್ರಹ ಪೀಡಿತರಾಗಿ ಪಕ್ಷದಲ್ಲಿ ದೊಡ್ಡ ಸ್ಥಾನದಲ್ಲಿ ಇರುವವರು ಹೇಳುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಡಲು ಇಷ್ಟವಿಲ್ಲದ ಅಮಿತ್ ಶಾ ಅವರು ಜೈನ ಧರ್ಮಕ್ಕೆ ಕೊಟ್ಟಿರುವ ಸ್ವತಂತ್ರ ಧರ್ಮದ ಸ್ಥಾನವನ್ನು ಮತ್ತು ಅಲ್ಪಸಂಖ್ಯಾತ ಸೌಲಭ್ಯವನ್ನು ವಾಪಸ್ಸು ನೀಡಲು ಮನಸ್ಸು ಮಾಡುವರೇ ಎಂದು ಪ್ರಶ್ನಿಸಿದರು.

ರಂಭಾಪುರಿಶ್ರೀಗಳ ಬದಲಾದ ನಿಲುವು:
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಕೊಟ್ಟರೆ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವುದಾಗಿ, ಗುರು ವರ್ಗದ ಮಠಾಧಿಪತಿಗಳೆಲ್ಲ ತಾಲೂಕು, ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಕೈಗೊಂಡು ಚುಣಾವಣೆಯ ಮೂಲಕ ಬುದ್ದಿ ಕಲಿಸುವುದಾಗಿ ಹೇಳುತ್ತಿದ್ದರು. ಈಗ ಆ ನಿಲುವು ಬದಲಿಸಿ ಯಾವುದೇ ಒತ್ತಾಯವನ್ನು ಜನರ ಮೇಲೆ ಹೇರುವುದಿಲ್ಲವಾಗಿಯೂ, ಜನರು ತಮಗೆ ಸರಿ ಎನಿಸಿದವರಿಗೆ ಮತ ಹಾಕಬಹುದಾಗಿರುತ್ತದೆ ಎಂದಿದ್ದಾರೆ. ಈ ಬದಲಾವಣೆಗೆ ಕಾರಣವೇನು ಎಂಬುದು ಆಶ್ವರ್ಯದ ಸಂಗತಿಯಾಗಿದೆ ಎಂದರು.

ಆರೆಸ್ಸೆಸ್ ಅಪಪ್ರಚಾರ ನಿಲ್ಲಿಸಲಿ:
ರಾಷ್ಟ್ರೀಯ ಸ್ವಯಂ ಸಂಘಕ್ಕೂ ಮೀರಿದ ದೇಶಪ್ರೇಮ ಲಿಂಗಾಯತ ಜನಸಮುದಾಯಕ್ಕಿದೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅಲ್ಪ ಸಂಖ್ಯಾತರ ಸ್ಥಾನಮಾನ ದೊರೆತರೆ ಭಾರತ ವಿಭಜನೆಯಾಗುತ್ತದೆ, ಹಿಂದೂ ಧರ್ಮ ಸೀಳುತ್ತದೆ ಎಂಬ ತಪ್ಪು ಕಲ್ಪನೆಗಳನ್ನು ಹುಟ್ಟಿಸುವ ಕೆಲಸವನ್ನು ಆರ್.ಎಸ್.ಎಸ್ ಮತ್ತು ಬಿಜೆಪಿ ಯವರು ಮಾಡುತ್ತಿದ್ದಾರೆ. ಇದು ಖಂಡನೀಯ. ಜೈನ, ಬೌದ್ದ, ಸಿಖ್ ಧರ್ಮಗಳು ಸ್ವತಂತ್ರ ಧರ್ಮದ ಸ್ಥಾನಮಾನ, ಅಲ್ಪಸಂಖ್ಯಾತರ ಸೌಲಭ್ಯ ಪಡೆದಿವೆ. ಇದು ಯಾವ ರೀತಿ ದೇಶಕ್ಕೆ ಮಾರಕವಾಗಿವೆ ? ಸೈನ, ವಾಯುಪಡೆ ಎಲ್ಲದರಲ್ಲೂ ಸಿಖ್ಖರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದರು.

ಚಕ್ರವರ್ತಿ ಸೂಲಿಬೆಲೆ ಸತ್ಯ ಅರಿತು ಮಾತನಾಡಲಿ:
ಲಿಂಗಾಯತರು ಶಾಂತಿಪ್ರೀಯರು, ಅಧ್ಯಾತ್ಮಿಕ ಪ್ರವೃತ್ತಿಯವರು. ಇವರಿಗೆ ತಮ್ಮ ಧರ್ಮದ ಅಸ್ಮಿತೆ ಬೇಕಾಗಿದೆಯಲ್ಲದೆ ಬೇರಾವ ಸ್ವಾರ್ಥವೂ ಇಲ್ಲ. ಕಟ್ಟಾ ಹಿಂದೂ ವಾದಿಗಳಾದ ಚಕ್ರವರ್ತಿ ಸೂಲಿಬೆಲೆಯವರು ವಿಚಿತ್ರವಾದ ಊಹೆ ಮಾಡಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಡುತ್ತಿರುವವರಿಗೆ ಉಗ್ರವಾದಿಗಳಿಂದ ಹಣ ಹರಿದು ಬರುತ್ತಿದೆ, ಕ್ರೈಸ್ತ ಧರ್ಮದ ಮುಂದಾಳುಗಳ ಕುಮ್ಮಕ್ಕು ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಬಹುಶ: ಅವರಿಗೆ ಮತೀಯ ಭ್ರಾಂತಿ ತಲೆಗೇರಿ ವಿವೇಕ ಕುಂದಿದಂತೆ ಕಾಣುತ್ತಿದೆ. ಕನ್ನಡ ನೆಲದಲ್ಲಿ ಬಸವಣ್ಣನವರಿಂದ ಕೊಡಲ್ಪಟ್ಟ ಲಿಂಗಾಯತ ಧರ್ಮ ಸತ್ವ ದೃಷ್ಟಿಯಿಂದ ವಿಶ್ವಧರ್ಮ. ವಚನ ಸಾಹಿತ್ಯ ಸಾರ್ವತ್ರಿಕ ಮೌಲ್ಯಗಳನ್ನು ಬೋಧಿಸುವ ಕ್ರಾಂತಿಕಾರಿ ಸಾಹಿತ್ಯ ಜಗತ್ತಿಗೆ ತಿಳಿಯಬೇಕು ಎಂಬುದು ಹೋರಾಟಗಾರರ ಕಳಕಳಿಯಾಗಿದೆ. ಇವರಿಗೆ ಯಾವುದೇ ಉಗ್ರವಾದಿಗಳೊಂದಿಗೆ ಸಂಬಂಧ ಇಲ್ಲ.  ಚಕ್ರವರ್ತಿಯವರಿಗೆ ಹಿಂದು ಧರ್ಮದ ಬಗ್ಗೆ ಅಭಿಮಾನವಿರಲಿ. ಆದರೆ ಅದು ದುರಭಿಮಾನವಾಗಿ ಮುಸ್ಲಿಂ, ಕ್ರೈಸ್ತರನ್ನು ದ್ವೇಷಿಸುವ ಕೆಲಸ ಮಾಡದಿರಲಿ. ಇದೇ ರೀತಿಯ ಪ್ರವೃತ್ತಿ ಮುಂದುವರೆಸಿದರೆ ಆರ್.ಎಸ್.ಎಸ್ ನಲ್ಲಿ ದುಡಿಯುತ್ತಿರುವ ಲಿಂಗಾಯತ ಯುವಕರಿಗೆ ಹೊರಬರಲು ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X