ರಿಪಬ್ಲಿಕ್ ಟಿವಿ ನಿರ್ದೇಶಕ ಸ್ಥಾನಕ್ಕೆ ರಾಜೀವ್ ಚಂದ್ರಶೇಖರ್ ರಾಜೀನಾಮೆ

ಬೆಂಗಳೂರು, ಎ.2: ಉದ್ಯಮಿ, ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಸೋಮವಾರ ರಿಪಬ್ಲಿಕ್ ಟಿವಿ ಚಾನೆಲನ್ನು ನಡೆಸುತ್ತಿರುವ ಎಆರ್ ಜಿ ಔಟ್ ಲೈಯರ್ ಏಶಿಯಾನೆಟ್ ನ್ಯೂಸ್ ಪ್ರೈ.ಲಿ. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಾನು ರಾಜಕೀಯ ಪಕ್ಷವೊಂದರ ಸದಸ್ಯ ಹಾಗು ಸಂಸದನಾಗಿರುವುದರಿಂದ ಈ ರಾಜೀನಾಮೆ ನೀಡುತ್ತಿದ್ದೇನೆ ಎಂದವರು ಹೇಳಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಕಂಪೆನಿಯ ಹೂಡಿಕೆದಾರರಾಗಿ ರಾಜೀವ್ ಮುಂದುವರಿಯಲಿದ್ದಾರೆ.
ಬಿಜೆಪಿ ಸೇರುವುದಕ್ಕೆ ಮೊದಲು ರಾಜೀವ್ ಚಂದ್ರಶೇಖರ್ ಪಕ್ಷೇತರ ಸಂಸದರಾಗಿದ್ದರು ಹಾಗು ಕೇರಳ ಎನ್ ಡಿಎಯ ಉಪಾಧ್ಯಕ್ಷರಾಗಿದ್ದರು.
Next Story





