ಎ.7ರಂದು ಭಟ್ಕಳ ತಾಲೂಕು ಮಟ್ಟದ ದೇಹದಾರ್ಢ್ಯ

ಭಟ್ಕಳ, ಎ. 2: ತಾಲೂಕು ಬಾಡಿ ಬಿಲ್ಡಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ಎ.7ರಂದು ಸಂಜೆ 6 ಗಂಟೆಗೆ ತಾಲೂಕು ಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ಕಮಲಾವತಿ ರಾಮನಾಥ ಶ್ಯಾನಭಾಗ ಸಭಾಗೃಹದಲ್ಲಿ ಎರ್ಪಡಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯ್ಕ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು ಸಂಘಟನೆಯ 2016ರಲ್ಲಿ ಆರಂಭವಾಗಿದ್ದು ಅಂದೇ ಸ್ಪರ್ಧೆಯನ್ನು ಆಯೋಜಿಸಿ ಮಿ. ಭಟ್ಕಳ ಸೇರಿದಂತೆ ವಿವಿಧ ಬಹುಮಾನ ನೀಡಲಾಗಿತ್ತು. ಈ ಬಾರಿಯೂ ಕೂಡಾ ಮಿ. ಭಟ್ಕಳ ಸೇರಿದಂತೆ ವಿವಿಧ ಬಹುಮಾನಗಳ ಜೊತೆಗೆ ಸಾಧಕರಾದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಯೂನಿವರ್ಸಿಟಿ ಬ್ಲ್ಯೂ ಆಗಿ ಹೊರ ಹೊಮ್ಮಿರುವ ಭಟ್ಕಳದ ನವೀನ ನಾಯ್ಕರನ್ನು ಈ ಸಂದರ್ಭದಲ್ಲಿ ಸಂಘಟನೆಯ ವತಿಯಿಂದ ಸನ್ಮಾನಿ ಸಲಾಗುವುದು ಎಂದೂ ಹೇಳಿದರು.
ಸ್ಪರ್ಧೆಯು 55 ಕೆಜಿ, 60 ಕೆಜಿ, 65 ಕೆಜಿ, 70 ಕೆಜಿ, 75 ಕೆಜಿ, 80 ಕೆಜಿ ವಿಭಾಗದಲ್ಲಿ ನಡೆಯಲಿದ್ದು ಪ್ರತಿ ವಿಭಾಗದಲ್ಲಿ ವಿಜೇತೆರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುವುದು. ಎಲ್ಲ 7 ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆಯನ್ನು ಎರ್ಪಡಿಸಿ ಮಿಸ್ಟರ್ ಭಟ್ಕಳ ವಿಜೇತರನ್ನು ಆಯ್ಕೆ ಮಾಡಲಾಗುವುದು. ಮಿಸ್ಟರ್ ಭಟ್ಕಳ ವಿಜೇತರಿಗೆ ರೂಪಾಯಿ ಐದು ಸಾವಿರ ನಗದು ಬಹುಮಾನದ ಜೊತೆಗೆ ಟ್ರೋಫಿ ನೀಡಲಾಗುವುದು ಎಂದರು. ತಾಲೂಕಿನ ವಿವಿದೆಡೆಯಿಂದ ಈಗಾಗಲೇ 50ಕ್ಕೂ ಸ್ಪರ್ಧಿಗಳು ಭಾಗವಹಿಸಲು ಉತ್ಸುಕತೆಯನ್ನು ತೋರಿಸಿದ್ದಾರೆ ಎಂದೂ ಹೇಳಿದರು.
ಸ್ಪರ್ಧಾ ಕಾರ್ಯಕ್ರಮವನ್ನು ಉದ್ಯಮಿ ಸುನೀಲ್ ನಾಯ್ಕ ಉದ್ಘಾಟಿಸಲಿದ್ದಾರೆ. ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ಭಟ್ಕಳದ ಪೊಲೀಸ್ ಉಪಾಧೀಕ್ಷಕ ವೆಲೆಂಟೈನ್ ಡಿಸೋಜಾ ಉಪಸ್ಥಿತರಿರಲಿದ್ದಾರೆ ಎಂದೂ ಹೇಳಿದರು. ಸಂಘದ ಗೌರವಾಧ್ಯಕ್ಷ ಅಕ್ಷಯ ನಾರಾಯಣ, ಅಧ್ಯಕ್ಷ ಅಝೀಝುರ್ರಹ್ಮಾನ್ ರುಕ್ನುದ್ದೀನ್, ಉಪಾಧ್ಯಕ್ಷ ನಝೀರ್ ಕಾಶೀಮ್‌ಜಿ, ಭಾಸ್ಕರ ನಾಯ್ಕ, ಕಾರ್ಯದರ್ಶಿ ವೆಂಕಟೇಶ ನಾಯ್ಕ, ಪ್ರಕಾಶ ನಾಯ್ಕ, ಆಸ್ಲಾಮ್, ರವಿ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.







