ಕಾಡುಬೆಟ್ಟು ಟಿ.ಎ.ಪೈ ಮಾಡರ್ನ್ ಶಾಲೆಯ ನವತಿ ಸಂಭ್ರಮ

ಉಡುಪಿ, ಎ.2: ಮಾಡರ್ನ್ ಸ್ಕೂಲ್ ಎಜುಕೇಶನ್ ಆಂಡ್ ಡೆವಲಪ್ ಮೆಂಟ್ ಟ್ರಸ್ಟ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಂಯೋಗದಲ್ಲಿ ಕಾಡು ಬೆಟ್ಟಿನ ಟಿ.ಎ.ಪೈ ಮಾಡರ್ನ್ ಹಿರಿಯ ಪ್ರಾಥಮಿಕ ಶಾಲೆಯ ನವತಿ ಸಂಭ್ರಮ ಕಾರ್ಯಕ್ರಮವು ಶನಿವಾರ ಶಾಲಾ ಸಭಾಂಗಣದಲ್ಲಿ ಜರಗಿತು.
ಸಮಾರಂಭವನ್ನು ಟ್ರಸ್ಟ್‌ನ ಅಧ್ಯಕ್ಷ ಎಚ್.ಆರ್.ಶೆಣೈ ಉದ್ಘಾಟಿಸಿದರು. ಈ ಸಂದರ್ಭದಲ್ಲಿ 11 ಮಂದಿ ಶಾಲಾ ನಿವೃತ್ತ ಶಿಕ್ಷಕರನ್ನು ಮ್ತು ದಾನಿಗಳನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಜಾನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರು, ರಂಗನಟಿ ಪೂರ್ಣಿಮಾ ಸುರೇಶ್, ನವತಿ ಸಂಭ್ರಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಲ್ಯಾಣಿ ಪೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ ಭಂಡಾರಿ, ಶಾಲಾ ವುುಖ್ಯ ಶಿಕ್ಷಕಿ ಸಾವಿತ್ರಿ ಉಪಸ್ಥಿತರಿದ್ದರು.
ಶ್ಯಾಮರಾಜ್ ಉಡುಪಿ ಕಾರ್ಯಕ್ರಮ ಸಂಯೋಜಿಸಿರು. ಚಿತ್ತರಂಜನ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಯಾಣಿ ಪೈ ವರದಿ ವಾಚಿಸಿದರು. ರಮೇಶ ಕಿಣಿ ವಂದಿಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
Next Story





