ಮಡಿಕೇರಿ: ಕಲ್ಲುಗುಂಡಿಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀಮಹಾವಿಷ್ಣು ದೈವದ ಒತ್ತೆಕೋಲ

ಮಡಿಕೇರಿ, ಏ.2: ಕಲ್ಲುಗುಂಡಿಯ ಶ್ರೀಮಹಾವಿಷ್ಣು ದೈವದ ಒತ್ತೆಕೋಲ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ದೈವಸ್ಥಾನದಿಂದ ಭಂಡಾರ ಹೊರಟು ಒತ್ತೆಕೋಲದ ಗದ್ದೆಗೆ ಬಂದ ನಂತರ ಬೃಹತ್ ಮೇಲೇರಿಗೆ ಅಗ್ನಿಸ್ಪರ್ಷ ಮಾಡಲಾಯಿತು. ರಾತ್ರಿ ದೈವದ ಕುಲ್ಚಾಟ ಮತ್ತು ಮುಂಜಾನೆ ಅಗ್ನಿಪ್ರವೇಶ ನಡೆಯಿತು. ನಂತರ ಪ್ರಸಾದ ವಿತರಣೆ ಹಾಗೂ ಮಾರಿಕಳ ಪ್ರವೇಶವಾಯಿತು. ನೆರೆದಿದ್ದ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸುವ ಮೂಲಕ ವಾರ್ಷಿಕ ಒತ್ತೆಕೋಲದ ಧಾರ್ಮಿಕ ವಿಧಿ ವಿಧಾನಗಳಿಗೆ ಸಾಕ್ಷಿಯಾದರು
Next Story





