ದೊಡ್ಡಣಗುಡ್ಡೆಯ ಲೋಕಲ್ ಬಾಯ್ಸೆ ತಂಡಕ್ಕೆ ಆರ್‌ಸಿ ಟ್ರೋಫಿ

ಮಣಿಪಾಲ, ಎ.3: ರಾಜೀವನಗರ ಕ್ರಿಕೆಟರ್ಸ್ ಆಶ್ರಯದಲ್ಲಿ ವಿಕಲಚೇತನ ಮತ್ತು ಬಡವರ ಸಹಾಯಾರ್ಥವಾಗಿ ರಾಜೀವನಗರದ ಆರ್‌ಸಿ ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಲಾದ ಏಳನೇ ವರ್ಷದ ಕ್ರಿಕೆಟ್ ಪಂದ್ಯಕೂಟದಲ್ಲಿ ದೊಡ್ಡಣಗುಡ್ಡೆಯ ಲೋಕಲ್ ಬಾಯ್ಸೆ ತಂಡ 44,444ರೂ. ನಗದು ಬಹುಮಾನ ಹಾಗೂ ಆರ್‌ಸಿ ಟ್ರೋಫಿಯನ್ನು ಗೆದ್ದುಕೊಂಡಿದೆ.
ಅಲೆವೂರಿನ ಬಿಜಿ ಫ್ರೆಂಡ್ಸ್ ತಂಡ 22,222ರೂ. ನಗದು ಬಹುಮಾನ ದೊಂದಿಗೆ ರನ್ನರ್‌ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಲೋಕಲ್ ಬಾಯ್ಸ್ ತಂಡದ ಇಮ್ರಾನ್ ಮಲ್ಪೆ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರು. ಅದೇ ತಂಡದ ಸಂತೋಷ್ ಉತ್ತಮ ದಾಂಡಿಗ ಪ್ರಶಸ್ತಿ ಹಾಗೂ ಬಿಜಿ ಫ್ರೆಂಡ್ಸ್ ತಂಡ ಪ್ರಜ್ವಲ್ ಗಂಗೊಳ್ಳಿ ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಆರ್‌ಸಿ ತಂಡದ ವತಿಯಿಂದ 5 ಮಂದಿ ಅಂಗವಿಕಲರಿಗೆ ತಲಾ 11 ಸಾವಿರ ರೂ. ಸಹಾಯಧನವನ್ನು ವಿತರಿಸಲಾಯಿತು. ಕೊರಗ ಸಮುದಾಯದ 30 ಮಂದಿ ಯುವಕರಿಗೆ ಸಮವಸ್ತ್ರ ವಿತರಿಸಲಾಯಿತು. ಆರ್‌ಸಿ ತಂಡದ ಸಂಚಾಲಕ ಸುನಿಲ್ ಶೇರಿಗಾರ್, ಮುಖ್ಯಸ್ಥ ನಾಗರಾಜ ಶೇರಿಗಾರ್, ಸದಸ್ಯರಾದ ಸುಧೀರ್, ಶಿವಪ್ರಸಾದ್, ಸಂದೀಪ್, ಧನಂಜಯ, ಸುಧೀರ್ ಶೇರಿಗಾರ್, ಸುಕೇತ್, ಕಲ್ಫಾನ್ ಮೊದಲಾದವರು ಉಪಸ್ಥಿತರಿದ್ದರು.





