‘ಹಲವು ಧರ್ಮಗಳು ಒಂದು ಭಾರತ’ ಇಸ್ಟಾಗ್ರಾಮ್ ಛಾಯಾಚಿತ್ರ ಸ್ಪರ್ಧೆ

ಉಡುಪಿ, ಎ.3: ಎಸ್‌ಐಓ ಉಡುಪಿ ಶಾಖೆಯ ವತಿಯಿಂದ ‘ಹಲವು ಧರ್ಮಗಳು ಒಂದು ಭಾರತ’ ಎಂಬ ಶೀರ್ಷಿಕೆಯಡಿಯಲ್ಲಿ ಸಾಮಾಜಿಕ ಜಾಲ ತಾಣ ಇನ್ಟಾಗ್ರಾಮ್ನಲ್ಲಿ ಛಾಯಾಚಿತ್ರ ಸ್ಪರ್ಧೆಯನ್ನು ಇತ್ತೀಚೆಗೆ ಆಯೋಜಿಸ ಲಾಗಿತ್ತು ಈ ಸ್ಪರ್ಧೆಗೆ ಧಾರ್ಮಿಕ ಸೌಹಾರ್ದತೆಯನ್ನು ಸಾರುವ ಛಾಯಾಚಿತ್ರಗಳು ಆಯ್ಕೆಯಾಗಿದ್ದವು. ಅದರಲ್ಲಿ ಕುಂದಾಪುರದ ಸುಬ್ರಹ್ಮಣ್ಯ ಪ್ರಥಮ, ನೂರುಲ್ಲ ಅಸಾದಿ ದ್ವಿತೀಯ ಹಾಗೂ ಅಲಿಕ್ ಡಿಸೋಜ ತೃತೀಯ ಬಹುಮಾನ ಪಡೆದುಕೊಂಡರು. ಹತ್ತು ಮಂದಿಗೆ ಸಮಾಧಾನಕರ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್‌ಐಒ ಸ್ಥಾನೀಯ ಅಧ್ಯಕ್ಷ ಫಾಝಿಲ್, ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಶಾಖೆಯ ಅಧ್ಯಕ್ಷ ಡಾ.ಅಬ್ದುಲ್ ಅಝೀಝ್, ಎಸ್‌ಐಓ ಸದಸ್ಯರಾದ ಯಾಸೀನ್ ಮನ್ನ, ಆಬಿದ್, ಯಹ್ಯಾ ಅಸಾದಿ, ಅರ್ಬಾಝ್, ರಫಾಝ್ ಮುಂತಾದವರು ಉಪಸ್ಥಿತರಿದ್ದರು.
Next Story





