ಅಮಿತ್ ಶಾ ಆಗಮಿಸಿದ ವಿಮಾನ ತಪಾಸಣೆ ನಡೆಸಿದ ಚುನಾವಣಾಧಿಕಾರಿಗಳು

ಹುಬ್ಬಳ್ಳಿ,ಎ.03: ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಆಗಮಿಸಿದ ವಿಶೇಷ ವಿಮಾನವನ್ನು ಚುನಾವಣಾಧಿಕಾರಿಗಳು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದರು.
ದೆಹಲಿಯಿಂದ ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾ ಅವರ ವಿಶೇಷ ವಿಮಾನವನ್ನು ಚುನಾವಣಾ ಸಂಚಾರ ವಿಚಕ್ಷಣಾ ದಳ ಅಧಿಕಾರಿಗಳಾದ ಆರ್.ಎನ್ ಈರೇಗೌಡ, ಹೆಚ್.ಜಿ ಯೋಗಾನಂದ, ಎಸ್.ಎ ಕರಪಾಲಿ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು.
ವಿಶೇಷ ವಿಮಾನ ಮಾತ್ರವಲ್ಲದೇ ಹುಬ್ಬಳ್ಳಿ ವಿಮಾನ ನಿಲ್ದಾಣದದಿಂದ ಕಾಗಿನೆಲೆಗೆ ಪ್ರಯಾಣ ಬೆಳೆಸಿದ ಹೆಲಿಕಾಪ್ಟರ್ ನ್ನು ಕೂಡ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದರು.
Next Story





