ಕೋಳಿ ಅಂಕಕ್ಕೆ ದಾಳಿ : ಆರು ಮಂದಿ ಬಂಧನ
ಶಿರ್ವ, ಎ.3: ಬೆಳಪು ಗ್ರಾಮದ ಪಣಿಯೂರು ರಸ್ತೆಯ ಮಲೆ ಜುಮಾದಿ ದೈವಸ್ಥಾನದ ಸಮೀಪ ಎ.2ರಂದು ಮಧ್ಯಾಹ್ನ ವೇಳೆ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಮೂಳೂರಿನ ಮನೋಜ್(37), ಬೆಳಪುವಿನ ರಾಜೇಶ್ ಶೆಟ್ಟಿ(40), ಅನಿಲ್ (45), ಎಲ್ಲೂರಿನ ಅಶೋಕ್(50), ಅದಮಾರಿನ ರಾಘು ಪೂಜಾರಿ(70), ಎರ್ಮಾಳಿನ ನಿತ್ಯಾನಂದ ಶೆಟ್ಟಿ(62) ಬಂಧಿತ ಆರೋಪಿಗಳು. ಇವರಿಂದ 2250ರೂ. ವೌಲ್ಯದ 8 ಹುಂಜಗಳು ಹಾಗೂ 3560ರೂ. ನಗದು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಶಿರ್ವ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





