ಮೂಡುಬಿದಿರೆ : ವ್ಯಕ್ತಿಯ ಮೃತದೇಹ ಪತ್ತೆ

ಮೂಡುಬಿದಿರೆ, ಎ.3: ಇಲ್ಲಿನ ಜಿ.ವಿ.ಪೈ ಆಸ್ಪತ್ರೆ ಎದುರಿನ ವಾಸವಿಲ್ಲದ ಮನೆಯ ಜಗಲಿಯಲ್ಲಿ ಅಪರಿಚಿತ ವೃದ್ಧನ ಮೃತ ದೇಹ ಪತ್ತೆಯಾಗಿದೆ. ಈ ವ್ಯಕ್ತಿ ಭಿಕ್ಷುಕನಂತೆ ಈ ಪರಿಸರದಲ್ಲಿ ಓಡಾಡಿಕೊಂಡಿದ್ದಾರೆನ್ನಲಾಗಿದೆ. ಸುಮಾರು 65 ವರ್ಷ ವಯಸ್ಸಾಗಿದ್ದು ಸಪೂರ ಶರೀರ ಹೊಂದಿದ್ದಾರೆ. ವಾರೀಸುದಾರರಿದ್ದಲ್ಲಿ ಮೂಡುಬಿದಿರೆ ಠಾಣೆಯನ್ನು ಸಂಪರ್ಕಿಸಬಹುದುದೆಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
Next Story





