ಎಲ್ಲೂರು: 6ರಂದು ಸ್ವಲಾತ್ ಮಜ್ಲಿಸ್
ಮಂಗಳೂರು, ಎ. 3: ಎಲ್ಲೂರಿನ ದಾರುಲ್ ಅಮಾನ್ ಎಜುಕೇಶನಲ್ ಅಕಾಡಮಿಯ ವತಿಯಿಂದ ಪ್ರತಿ ತಿಂಗಳಿನಂತೆ ಈ ತಿಂಗಳ ಎ.6ರಂದು ಮಧ್ಯಾಹ್ನ 3 ಗಂಟೆಗೆ ಸ್ವಲಾತ್ ಮಜ್ಲಿಸ್ ಹಾಗೂ ಧಾರ್ಮಿಕ ಕಾರ್ಯಕ್ರಮವು ಎಲ್ಲೂರಿನ ಹಿರಾ ನಗರದಲ್ಲಿ ನಡೆಯಲಿದೆ.
ಅಕಾಡಮಿಯ ಮುಖ್ಯಸ್ಥ ಅಲ್‌ಹಾಜ್ ಸಲೀಂ ಮದನಿ ಕುತ್ತಾರು ಅವರು ಸ್ವಲಾತ್ ಮಜ್ಲಿಸ್ ಹಾಗೂ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಉಸ್ಮಾನ್ ಮದನಿ ನೇಜಾರು ಅವರು ಭಾಗವಹಿಸಲಿದ್ದಾರೆ ಎಂದು ಅಕಾಡಮಿಯ ಪ್ರಕಟನೆ ತಿಳಿಸಿದೆ.
Next Story





