ಅಸದ್ ವಿರುದ್ಧದ ಕ್ರಾಂತಿ ಮುಂದುವರಿಕೆ: ಸಿರಿಯ ಪ್ರತಿಪಕ್ಷ ಘೋಷಣೆ

ಡಮಾಸ್ಕಸ್, ಎ. 3: ಬಂಡುಕೋರರ ನಿಯಂತ್ರಣದಲ್ಲಿದ್ದ ಪೂರ್ವ ಘೌತ ಪ್ರದೇಶವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಸಿರಿಯದ ಸರಕಾರಿ ಪಡೆಗಳು ಸಿದ್ಧತೆ ನಡೆಸಿರುವಂತೆಯೇ, ಅಧ್ಯಕ್ಷ ಬಶರ್ ಅಸದ್ ವಿರುದ್ಧದ ಕ್ರಾಂತಿಯನ್ನು ಮುಂದುವರಿಸುವುದಾಗಿ ಪ್ರತಿಪಕ್ಷಗಳು ಸೋಮವಾರ ಪಣತೊಟ್ಟಿವೆ.
‘‘ಸಿರಿಯದಲ್ಲಿ ನಡೆಯುತ್ತಿರುವುದು ಭೌಗೋಳಿಕ ಲೆಕ್ಕಾಚಾರವಲ್ಲ. ಬಂಡಾಯವು ಜನರ ಹೃದಯಗಳು ಮತ್ತು ಮನಸ್ಸುಗಳಲ್ಲಿದೆ. ಅಸದ್‌ರ ಅಮಾನುಷ ಸರ್ವಾಧಿಕಾರವನ್ನು ಜನರು ತಿರಸ್ಕರಿಸಿದ್ದಾರೆ. ನಾವು ಎಂದಿಗೂ ವಿರಮಿಸುವುದಿಲ್ಲ’’ ಎಂದು ‘ಅರಬ್ ನ್ಯೂಸ್’ನೊಂದಿಗೆ ಮಾತನಾಡಿದ ಪ್ರತಿಪಕ್ಷ ವಕ್ತಾರ ಯಹ್ಯಾ ಅಲ್-ಅರೀದಿ ಹೇಳಿದರು.
ರಶ್ಯ ಸೇನೆಯ ಬೆಂಬಲ ಪಡೆದಿರುವ ಸಿರಿಯದ ಸರಕಾರಿ ಪಡೆಗಳು ಇತ್ತೀಚಿನ ವರ್ಷಗಳಲ್ಲಿ ಬಂಡುಕೋರರ ವಿರುದ್ಧ ನಿರಂತರ ಗೆಲುವುಗಳನ್ನು ದಾಖಲಿಸುತ್ತಿವೆ.
‘‘ಇವುಗಳು ಅಸಾದ್‌ರ ಗೆಲುವುಗಳಲ್ಲ. ಇದು ನಾಗರಿಕರ ವಿರುದ್ಧ ಭಯಾನಕ ಸೇನಾ ಶಕ್ತಿಯನ್ನು ಬಳಸಿ ಸಾಧಿಸಲಾದ ಅತಿಕ್ರಮಣಗಳು’’ ಎಂದು ಅಲ್-ಅರೀದಿ ಅಭಿಪ್ರಾಯಪಟ್ಟರು.
Next Story





