ಎಸ್ಡಿಎಂ ಸ್ನಾತಕೋತ್ತರ ಆಡಳಿತೋದ್ಯಮ ಕ್ಷೇತ್ರದ ನಿರ್ದೇಶಕರಾಗಿ ಡಾ.ಸೀಮಾ ಸುರೇಶ್ ಶೆಣೈ ನೇಮಕ
ಮಂಗಳೂರು, ಎ.5: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಉದ್ಯಮಾಡಳಿತ ಕಾಲೇಜು ಸಂಶೋಧನಾ ಮತ್ತು ಸ್ನಾತಕೋತ್ತರ ಆಡಳಿತೋದ್ಯಮ ಕೇಂದ್ರ ಮಂಗಳೂರು ಇದರ ನಿರ್ದೇಶಕರಾಗಿ ಡಾ.ಸೀಮಾ ಸುರೇಶ್ ಶೆಣೈ ಅವರು ಇತ್ತೀಚೆಗೆ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಡಾ. ಸೀಮಾ ಸುರೇಶ್ ಮಂಗಳೂರು ವಿಶ್ವ ವಿದ್ಯಾನಿಲಯ ನಡೆಸಿದ ಬಿ.ಬಿ.ಎಂ ಪರೀಕ್ಷೆಯಲ್ಲಿ ಏಳನೆ ರ್ಯಾಂಕ್ ಹಾಗೂ ಜಸ್ಟೀಸ್ ಕೆ.ಎಸ್ ಹೆಗ್ಡೆ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ನಲ್ಲಿ ಎಂಬಿಎ ಮಾಡಿದ್ದು ವಿಟಿಯು ನಡೆಸಿದ ಪರೀಕ್ಷೆಯಲ್ಲಿ ಆರನೆ ರ್ಯಾಂಕ್ ಪಡೆದಿದ್ದಾರೆ ಮತ್ತು ಎನ್ಐಟಿಕೆ ಯಿಂದ ಡಾಕ್ಟರೇಟ್ ಪದವಿ ಪಡೆದು ಸಂಶೋಧನಾ ಸಲಹೆಗಾರರಾಗಿದ್ದರು.
Next Story