ಎ.6ರಂದು ವಿಶ್ವ ಚರ್ಮ ಆರೋಗ್ಯ ದಿನಾಚರಣೆ
ಉಡುಪಿ, ಎ.5: ಅಖಿಲ ಭಾರತ ಚರ್ಮರೋಗ, ಕುಷ್ಟ ರೋಗ, ದೈಹಿಕ ರೋಗ ತಜ್ಞರ ಸಂಘದ ಕರಾವಳಿ ಶಾಖೆಯ ವತಿಯಿಂದ ಎ.6ರಂದು ವಿಶ್ವ ಚರ್ಮ ಆರೋಗ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಪ್ರಯುಕ್ತ ಸ್ಟೆರಾಯ್ಡೆ ಕ್ರೀಮ್ಗಳ ದುರ್ಬಳಕೆ, ಚರ್ಮರೋಗದ ಬಗ್ಗೆ ಸಾಮುದಾಯಿಕ ಅರಿವು, ಶಿಲೀಂಧ್ರ ಸೋಂಕುಗಳ ಬಗ್ಗೆ ಜಾಗೃತಿ ಕಾರ್ಯ ಕ್ರಮಗಳನ್ನು ಜಿಲ್ಲೆಯ ವಿವಿಧ ಆಸ್ಪತ್ರೆಗಳನ್ನು ಆಯೋಜಿಸಲಾಗುವುದು ಎಂದು ಸಂಘದ ಕರಾವಳಿ ಶಾಖೆಯ ಡಾ.ಸತೀಶ್ ಪೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿ ದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಾ.ರಾಘವೇಂದ್ರ ರಾವ್, ಡಾ.ಸುಭಾಷ್ ಕಿಣಿ ಉಪಸ್ಥಿತರಿದ್ದರು.
Next Story