ಮನಮೋಹನ್ ಸಿಂಗ್ ಪಾತ್ರದಲ್ಲಿ ಅನುಪಮ್ ಖೇರ್ ಹೇಗೆ ಕಾಣಿಸುತ್ತಾರೆ ನೋಡಿ
100 ಶೇ. ಪರ್ಫೆಕ್ಟ್ ಎನ್ನುತ್ತಿದ್ದಾರೆ ಟ್ವಿಟರಿಗರು
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜೀವನಾಧಾರಿತ, ತಮ್ಮ ಮುಂದಿನ ಚಿತ್ರವಾದ ‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರ ಕೆಲ ಸ್ಟಿಲ್ ಗಳನ್ನು ಬಾಲಿವುಡ್ ನಟ ಅನುಪಮ್ ಖೇರ್ ಇಂದು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.
“ವಿಜಯ್ ರತ್ನಾಕರ್ ಗುಟ್ಟೆ ನಿರ್ದೇಶನದ ‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಪಾತ್ರದಲ್ಲಿ ನನ್ನ ಫಸ್ಟ್ ಲುಕ್” ಎಂದು ಟ್ವೀಟ್ ಮಾಡಿರುವ ಅವರು ಫೊಟೊಗಳನ್ನು ಪೋಸ್ಟ್ ಮಾಡಿದ್ದಾರೆ.
ಬಿಳಿ ಕುರ್ತಾ ಹಾಗು ನೀಲಿ ಪೇಟ ಧರಿಸಿರುವ ಅನುಪಮ್ ಖೇರ್ ಅಕ್ಷರಶಃ ಮನಮೋಹನ್ ಸಿಂಗ್ ರನ್ನೇ ಹೋಲುತ್ತಿದ್ದಾರೆ. ಮನಮೋಹನ್ ಸಿಂಗ್ ರಂತೆ ಕೈಮುಗಿದು ಮುಗುಳ್ನಗುವ, ಕಚೇರಿಯಲ್ಲಿ ನಿಂತಿರುವ ಫೊಟೊಗಳನ್ನು ಖೇರ್ ಟ್ವೀಟ್ ಮಾಡಿದ್ದಾರೆ.
ಅನುಪಮ್ ಖೇರ್ ಈ ಫೋಟೊಗಳನ್ನು ಟ್ವೀಟ್ ಮಾಡುತ್ತಲೇ ಟ್ವಿಟರಿಗರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಅನುಪಮ್ ಖೇರ್ ಮನಮೋಹನ್ ಸಿಂಗ್ ರನ್ನೇ ಹೋಲುವುದಾಗಿ ಹಲವರು ಟ್ವೀಟ್ ಮಾಡಿದ್ದಾರೆ.
Next Story