ಮದ್ದೂರು: ಕೆರೆಯಲ್ಲಿ ಮುಳುಗಿ ಬಾಲಕ ಮೃತ್ಯು

ಮದ್ದೂರು, ಎ.5: ತಾಲೂಕಿನ ಹೆಮ್ಮನಹಳ್ಳಿ ಗ್ರಾಮದ ಕೆರೆಗೆ ಈಜಲು ಹೋಗಿದ್ದ ಶಾಲಾ ಬಾಲಕ ಮುಳುಗಿ ಮೃತಪಟ್ಟಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೆ ತರಗತಿ ವ್ಯಾಸಂಗ ಮಾಡುತ್ತಿರುವ ಯೋಗೀಶ್ ಮೃತ ಬಾಲಕ.
ಮೂಲತಃ ಚನ್ನಪಟ್ಟಣ ತಾಲೂಕಿನ ಕರಿಯಪ್ಪನದೊಡ್ಡಿ ಗ್ರಾಮದ ಪಲ್ಲವಿ ಹಾಗೂ ಗುರು ದಂಪತಿಗಳ ಪುತ್ರ ಯೋಗೇಶ್ ಅಜ್ಜಿ ಮನೆಯಲ್ಲಿದ್ದ.
ಈ ಸಂಬಂಧ ಕೆಸ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





