ವೇಟ್ಲಿಫ್ಟಿಂಗ್: ಭಾರತಕ್ಕೆ ಎರಡನೇ ಚಿನ್ನ ಗೆದ್ದುಕೊಟ್ಟ ಸಂಜಿತಾ
ಹೊಸದಿಲ್ಲಿ, ಎ. 6: ಭಾರತದ ಖ್ಯಾತ ವೇಟ್ಲಿಫ್ಟರ್ ಸಂಜಿತಾ ಚಾನು ಭಾರತಕ್ಕೆ ವೇಟ್ಲಿಫ್ಟಿಂಗ್ನಲ್ಲಿ ಎರಡನೇ ಬಂಗಾರದ ಪದಕ ಗೆದ್ದುಕೊಟ್ಟಿದ್ದಾರೆ.
ಮೀರಾಬಾಯಿ ಚಾನು ಮತ್ತು ಪಿ.ಗುರುರಾಜ್ ಅವರು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿಪದಕ ಗೆಲ್ಲುವುದರೊಂದಿಗೆ 2018ರ ಕಾಮನ್ವೆಲ್ತ್ ಕ್ರೀಡಾಕೂಟದ ಅಭಿಯಾನವನ್ನು ಆರಂಭಿಸಿದ್ದ ಭಾರತ ಎರಡನೇ ದಿನ ಮತ್ತೊಂದು ಚಿನ್ನದ ಪದಕ ಬಾಚಿಕೊಂಡಿತು.
ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ಸಂಜಿತಾ ಚಿನ್ನ ಗೆದ್ದರು. ಭಾರತದ ನಮನ್ ತನ್ವರ್ ಹಾಗೂ ಅಮಿತ್ ಅವರು ಪ್ರಾಥಮಿಕ ಸುತ್ತಿನ ಬಾಕ್ಸಿಂಗ್ನಲ್ಲಿ ಇಂದು ಸೆಣೆಸಲಿದ್ದಾರೆ. ಮೊದಲ ಪಂದ್ಯವನ್ನು ವೇಲ್ಸ್ ವಿರುದ್ಧ ಸೋತ ಭಾರತದ ಮಹಿಳಾ ಹಾಕಿ ತಂಡ ಇಂದು ಮಲೇಷ್ಯಾವನ್ನು ಎದುರಿಸಲಿದೆ. ಭಾರತದ ಬ್ಯಾಡ್ಮಿಂಟನ್ ತಂಡ ಸ್ಕಾಟ್ಲೆಂಡ್ ತಂಡದ ವಿರುದ್ಧ ಸೆಣೆಸಲಿದೆ.
ಸ್ನ್ಯಾಚ್ನಲ್ಲಿ 85 ಕೆ.ಜಿ. ಹಾಗೂ ಕ್ಲೀನ್ ಜೆರ್ಕ್ನಲ್ಲಿ 108 ಕೆ.ಜಿ. ಭಾರ ಎತ್ತಿದ ಚಾನು 193 ಕೆ.ಜಿ. ಎತ್ತುವ ಮೂಲಕ ಚಿನ್ನ ಗೆದ್ದರು. ಪಪೂವಾ ಗುನಿಯಾದ ಲಾವೊ ದಿಕಾ ತೋವಾ 182 ಕೆಜಿ ಹಾಗೂ ನ್ಯೂಜಿಲ್ಯಾಮಡ್ನ ರಚೆಲ್ ಲೆಬಾನಿಕ್ ಬಝಿನೆಟ್ 181 ಕೆಜಿಯೊಂದಿಗೆ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು.