ಹೊನ್ನಾಳಿ: ಬೈಕ್ - ಲಾರಿ ಮುಖಾಮುಖಿ ಢಿಕ್ಕಿ; ಇಬ್ಬರು ಮೃತ್ಯು
ಹೊನ್ನಾಳಿ,ಎ.06: ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮತ್ತು ಹಿಂಬದಿ ಸವಾರ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಹನುಮಸಾಗರ ತಾಂಡಾ ಸಮೀಪದ ಅವಲಕ್ಕಿ ಮಿಲ್ ಬಳಿ ನಡೆದಿದೆ.
ಹಾವೇರಿ ಜಿಲ್ಲೆ ರಟ್ಟೇಹಳ್ಳಿ ತಾಲೂಕಿನ ಕಿರಿಗೇರಿ ಗ್ರಾಮದ ಮಂಜುನಾಥ್(22) ಮತ್ತು ಹೊನ್ನಾಳಿ ತಾಲೂಕು ಸಾಸ್ವೇಹಳ್ಳಿ ಸಮೀಪದ ಹನಗವಾಡಿ ಗ್ರಾಮದ ಥಾನೇಶ್(32) ಮೃತಪಟ್ಟವರು ಎಂದು ತಿಳಿದು ಬಂದಿದೆ.
ತಮಿಳುನಾಡು ನೋಂದಣಿ ಸಂಖ್ಯೆಯ ಲಾರಿ ಕೊಯಮತ್ತೂರಿನಿಂದ ಗೋವಾಕ್ಕೆ ಕಬ್ಬಿಣದ ಲೋಡ್ ತುಂಬಿಕೊಂಡು ಹೋಗುತ್ತಿತ್ತು ಎನ್ನಲಾಗಿದ್ದು,
ಹೊನ್ನಾಳಿ ಪಿಎಸ್ಐ ಎನ್.ಸಿ. ಕಾಡದೇವರ ಮತ್ತು ಸಿಬ್ಬಂದಿ ಅಪಘಾತದ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಹೊನ್ನಾಳಿಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story