Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಕೋಕಂ ನೀಡುವ ಅದ್ಭುತ ಆರೋಗ್ಯಲಾಭಗಳ ಬಗ್ಗೆ...

ಕೋಕಂ ನೀಡುವ ಅದ್ಭುತ ಆರೋಗ್ಯಲಾಭಗಳ ಬಗ್ಗೆ ತಿಳಿದುಕೊಳ್ಳಿ

ವಾರ್ತಾಭಾರತಿವಾರ್ತಾಭಾರತಿ7 April 2018 3:54 PM IST
share
  • ಕೋಕಂ ನೀಡುವ ಅದ್ಭುತ ಆರೋಗ್ಯಲಾಭಗಳ ಬಗ್ಗೆ ತಿಳಿದುಕೊಳ್ಳಿ
  • ಕೋಕಂ ನೀಡುವ ಅದ್ಭುತ ಆರೋಗ್ಯಲಾಭಗಳ ಬಗ್ಗೆ ತಿಳಿದುಕೊಳ್ಳಿ
  • ಕೋಕಂ ನೀಡುವ ಅದ್ಭುತ ಆರೋಗ್ಯಲಾಭಗಳ ಬಗ್ಗೆ ತಿಳಿದುಕೊಳ್ಳಿ

ಬದುಕಿನ ಎಲ್ಲ ಸವಾಲುಗಳಿಗೂ ಪ್ರಕೃತಿಯ ಬಳಿ ಉತ್ತರವಿದೆ ಎನ್ನುವುದು ಸರಿಯಾದ ಮಾತೇ ಆಗಿದೆ. ನೈಸರ್ಗಿಕ ವಿಧಾನಗಳ ಮೂಲಕ ಎಲ್ಲ ಕಾಯಿಲೆಗಳಿಗೂ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಯಾವುದೇ ಸಸ್ಯವನ್ನು ನಾವೆತ್ತಿಕೊಂಡರೂ ಅದರಲ್ಲಿ ಔಷಧೀಯ ಗುಣಗಳನ್ನು ಕಾಣಬಹುದಾಗಿದೆ. ಗಾರ್ಸಿನಿಯಾ ಇಂಡಿಕಾ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಕೋಕಂ ಅಥವಾ ಪುನರ್ಪುಳಿ ಕೂಡ ಈ ಮಾತಿಗೆ ಅಪವಾದವಾಗಿಲ್ಲ. ಹಲವಾರು ಆರೋಗ್ಯಲಾಭಗಳನ್ನು ಹೊಂದಿರುವ ಕೋಕಂ ಅನ್ನು ಯಾವುದೇ ರೂಪದಲ್ಲಿ ಸೇವಿಸಿದರೂ ಅದರ ಔಷಧೀಯ ಗುಣಗಳಿಗೆ ಚ್ಯುತಿಯುಂಟಾಗುವುದಿಲ್ಲ.

ಈ ಹಣ್ಣಿನ ಅದ್ಭುತ ಔಷಧೀಯ ಗುಣಗಳ ಬಗ್ಗೆ ಮಾಹಿತಿ ಇಲ್ಲಿದೆ....

► ಅದು ಪೌಷ್ಟಿಕಾಂಶಗಳ ಆಗರ

ಕೋಕಂ ಹಲವಾರು ಪೌಷ್ಟಿಕಾಂಶಗಳನ್ನು ಒಳಗೊಂಡಿದೆ. ಸಿಟ್ರಿಕ್ ಆ್ಯಸಿಡ್, ಮ್ಯಾಲಿಕ್ ಆ್ಯಸಿಡ್, ಆ್ಯಸಿಟಿಕ್ ಆ್ಯಸಿಡ್, ಹೈಡ್ರೋ ಆ್ಯಸಿಟಿಕ್ ಆ್ಯಸಿಡ್ ಮತ್ತು ಎಸ್ಕಾರ್ಬಿಕ್ ಆ್ಯಸಿಡ್ ಇವೆಲ್ಲವುಗಳ ಜೊತೆಗೆ ಹೇರಳ ಕಾರ್ಬೊಹೈಡ್ರೇಟ್‌ಗಳು ಮತ್ತು ನಾರಿನಂಶಗಳು ಅದರಲ್ಲಿವೆ. ಕೋಕಂ ಸೇವನೆಯಿಂದ ಶರೀರದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ. ಅದು ಭ್ರೂಣದ ಬೆಳವಣಿಗೆಗೆ ನೆರವಾಗುವುದರಿಂದ ಗರ್ಭಿಣಿಯರಿಗೆ ವಿಶೇಷ ಲಾಭಕಾರಿಯಾಗಿದೆ.

► ಅದು ಉರಿಯೂತ ನಿರೋಧಕ

ಕೋಕಂ ಅತ್ಯುತ್ತಮ ಅಲರ್ಜಿ ನಿರೋಧಕ ಗುಣಗಳನ್ನು ಹೊಂದಿದ್ದು, ಅಲರ್ಜಿಯಿಂದ ಮೈಮೇಲೆ ದದ್ದುಗಳುಂಟಾದಾಗ ಅದನ್ನು ನೇರವಾಗಿ ಲೇಪಿಸಬಹುದು. ಹುಣ್ಣುಗಳು ಮತ್ತು ಸೂರ್ಯನ ಬಿಸಿಲಿನಿಂದ ಬೊಕ್ಕೆಗಳಾದಾಗ ಕೋಕಂ ಸೇವನೆ ಉತ್ತಮ ಉಪಾಯವಾಗಿದೆ. ಅದು ಸಾವಯವ ಗುಣವನ್ನು ಹೊಂದಿರುವುದರಿಂದ ಅದನ್ನು ಸಣ್ಣಮಕ್ಕಳಿಗೂ ನೀಡಬಹುದು ಮತ್ತು ಯಾವುದೇ ಅಡ್ಡಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ಅದರಲ್ಲಿಯ ಉರಿಯೂತ ನಿರೋಧಕ ಗುಣ ಗಳಿಂದಾಗಿ ಸುಟ್ಟಗಾಯಗಳ ಚಿಕಿತ್ಸೆಗೂ ಸೂಕ್ತವಾಗಿದೆ.

► ಜೀರ್ಣಕಾರ್ಯಕ್ಕೆ ಸಹಕಾರಿ

 ಹಲವಾರು ಜನರು ಗ್ಯಾಸ್ಟ್ರಿಕ್ ಸಮಸ್ಯೆಗಳಿರುವುದರಿಂದ ಸಿಟ್ರಿಕ್ ಉತ್ಪನ್ನಗಳ ಸೇವನೆಯಿಂದ ದೂರವೇ ಉಳಿಯುತ್ತಾರೆ. ಇಂತಹ ಜನರು ಹೊಟ್ಟೆಯಲ್ಲಿ ಯಾವುದೇ ತೊಂದರೆಯನ್ನುಂಟು ಮಾಡದ ಕೋಕಂ ಅನ್ನು ಆರಾಮವಾಗಿ ಸೇವಿಸಬಹುದು. ವಾಸ್ತವದಲ್ಲಿ ಕೋಕಂ ಹಸಿವೆಯನ್ನು ಹೆಚ್ಚಿಸುತ್ತದೆ ಮತ್ತು ವಯಸ್ಕರಲ್ಲಿ ಒಟ್ಟಾರೆ ಜೀರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆಗಾಗ್ಗೆ ಮಲಬದ್ಧತೆ ಮತ್ತು ಭೇದಿಯಿಂದ ಬಳಲುತ್ತಿರುವವರು ಕೋಕಂ ಸೇವಿಸುತ್ತಿದ್ದರೆ ಆ ಸಂಕಟದಿಂದ ಪಾರಾಗಬಹುದು.

► ವಯಸ್ಸಾಗುವುದನ್ನು ತಡೆಯುತ್ತದೆ

ವಯಸ್ಸಾಗುತ್ತಿರುವ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾಗುವ 35ರ ಪ್ರಾಯವನ್ನು ದಾಟಿದ ವ್ಯಕ್ತಿಗಳಿಗೆ ಕೋಕಂ ಅತ್ಯಂತ ಸೂಕ್ತವಾಗಿದೆ. ಆಧುನಿಕ ಬದುಕಿನಲ್ಲಿಯ ಒತ್ತಡ ಮತ್ತು ಆತಂಕಗಳು ಹಾಗೂ ನಗರಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದಾಗಿ ಚರ್ಮದಲ್ಲಿಯ ಮೃತ ಜೀವಕೋಶಗಳ ದುರಸ್ತಿ ಮತ್ತು ಪುನಃಶ್ಚೇತನ ತುಂಬ ಕಠಿಣವಾಗಿದೆ. ಇಂತಹ ಸ್ಥಿತಿಯಲ್ಲಿ ತನ್ನಲ್ಲಿಯ ಸಮೃದ್ಧ ಉತ್ಕರ್ಷಣ ನಿರೋಧಕಗಳಿಂದಾಗಿ ವಯಸ್ಸಾಗುವುದನ್ನು ತಡೆಯುವ ಗುಣಗಳನ್ನು ಹೊಂದಿರುವ ಕೋಕಂ ಬಳಕೆ ಅದ್ಭುತ ಪರಿಣಾಮಗಳನ್ನು ನೀಡುತ್ತದೆ.

► ಸೋಂಕುಗಳನ್ನು ದೂರವಿಡುತ್ತದೆ

ಕೋಕಂ ಉತ್ಕರ್ಷಣ ನಿರೋಧಕ ಮತ್ತು ಬೂಷ್ಟು ನಿರೋಧಕ ಗುಣಗಳನ್ನು ಹೊಂದಿರುವ ಕೆಲವೇ ನೈಸರ್ಗಿಕ ಉತ್ಪನ್ನಗಳಲ್ಲೊಂದಾಗಿದೆ. ಇದರಿಂದಾಗಿ ಅದು ಎಲ್ಲ ಬಗೆಯ ಸೋಂಕುಗಳನ್ನು ತಡೆಯಲು ಸಮರ್ಥವಾಗಿದೆ. ಅದು ಆಲ್ಫಾ ಟಾಕ್ಸಿನ್‌ಗಳನ್ನು ನಿವಾರಿಸುವುದರಿಂದ ಆಹಾರ ಸಂರಕ್ಷಕವಾಗಿಯೂ ಅದನ್ನು ಬಳಸಬಹುದಾಗಿದೆ.

► ಆಯುರ್ವೇದಲ್ಲಿ ಬಳಕೆ

ಆಯುರ್ವೇದದಲ್ಲಿ ಕೋಕಂ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಸಂದುನೋವು, ಕಿವಿಸೋಂಕುಗಳು, ಚರ್ಮರೋಗ ಮತ್ತು ಕರುಳಿನ ಸಮಸ್ಯೆಗಳಿರುವವರ ಚಿಕಿತ್ಸೆಗೆ ಕೋಕಂ ಬಳಕೆಯನ್ನು ಆಯುರ್ವೇದ ದಲ್ಲಿ ಶಿಫಾರಸು ಮಾಡಲಾಗಿದೆ. ಮಹಿಳೆಯರಲ್ಲಿ ಋತುಚಕ್ರ ವಿಳಂಬಕ್ಕೂ ಕೋಕಂ ಪರಿಹಾರ ನೀಡುತ್ತದೆ. ಹಿಮ್ಮಡಿಗಳಲ್ಲಿಯ ಬಿರುಕುಗಳನ್ನೂ ಅದು ನಿವಾರಿಸುತ್ತದೆ.

► ಕಾಯಿಲೆಗಳ ವಿರುದ್ಧ ರಕ್ಷಣೆ ನೀಡುತ್ತದೆ

ಕೋಕಂ ಒಳಗೊಂಡಿರುವ ಕೆಲವು ರಾಸಾಯನಿಕಗಳಿಂದಾಗಿ ಅದನ್ನು ಅಲ್ಸರ್ ನಿರೋಧಕವಾಗಿ ಬಳಸಬಹುದು ಎನ್ನುವುದನ್ನು ಜಪಾನಿ ಸಂಶೋಧನೆಗಳು ಸಿದ್ಧಪಡಿಸಿವೆ. ನೋವನ್ನು ಶಮನಗೊಳಿಸುವ ಅದು ಟ್ಯೂಮರ್‌ಗಳನ್ನು ನಿವಾರಿಸುತ್ತದೆ. ಅದು ಯಕೃತ್ತನ್ನು ರಕ್ಷಿಸುವ ಜೊತೆಗೆ ಹಲವಾರು ನರಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ. ನಿಯಮಿತವಾಗಿ ಕೋಕಂ ಸೇವನೆಯಿಂದ ಕೆಲವು ಬಗೆಯ ಕ್ಯಾನ್ಸರ್ ಗಳನ್ನೂ ತಡೆಯಬಹುದು. ಅದು ರಕ್ತದಲ್ಲಿಯ ಸಕ್ಕರೆಯನ್ನು ನಿಯಂತ್ರಿ ಸಲು ನೆರವಾಗುವುದರಿಂದ ಮಧುಮೇಹಿಗಳಿಗೂ ಸೂಕ್ತವಾಗಿದೆ.

► ಕೋಕಂ ಪಾರ್ಶ್ವವಾಯು ನಿರೋಧಕ ಗುಣ ಹೊಂದಿದೆ.

ಬೇಸಿಗೆ ದಿನಗಳಲ್ಲಿ ಕೋಕಂ ಸೇವನೆಯು ಹೃದ್ರೋಗಗಳ ಅಪಾಯ ವನ್ನು ತಡೆಯಲು ನೆರವಾಗುತ್ತದೆ. 50 ವರ್ಷಕ್ಕೂ ಹೆಚ್ಚಿನ ಪ್ರಾಯದವರಿಗೆ ಇದು ಹೆಚ್ಚು ಲಾಭಕಾರಿಯಾಗಿದೆ. ಅದು ಪಾರ್ಶ್ವ ವಾಯುವಿನ ವಿರುದ್ಧ ರಕ್ಷಣೆ ನೀಡುತ್ತದೆ.

► ತೂಕ ಇಳಿಕೆಗೆ ನೆರವಾಗುತ್ತದೆ

ಕೋಕಂ ರುಚಿಕರ ಹಣ್ಣು ಮಾತ್ರವಲ್ಲ, ಅದು ಕೆಲೊರಿಗಳನ್ನೂ ಕಡಿಮೆ ಪ್ರಮಾಣದಲ್ಲಿ ಒಳಗೊಂಡಿದೆ. ಅದರಲ್ಲಿಯ ಆಮ್ಲವು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ಅದು ಸ್ಯಾಚ್ಯುರೇಟೆಡ್ ಫ್ಯಾಟ್‌ಗಳನ್ನು ಒಳಗೊಂಡಿಲ್ಲ ಎನ್ನುವುದು ಇನ್ನೊಂದು ಧನಾತ್ಮಕ ಅಂಶವಾಗಿದೆ. ತನ್ನ ಈ ಗುಣಗಳಿಂದಾಗಿ ಅದು ಹೆಚ್ಚುವರಿ ಕೊಬ್ಬಿನ ಪ್ರಮಾಣವನ್ನು ತಗ್ಗಿಸುವ ಮೂಲಕ ಶರೀರದ ತೂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ.

► ಚರ್ಮ ಮತ್ತು ತಲೆಗೂದಲಿನ ಆರೋಗ್ಯಕ್ಕೆ ಪೂರಕ

ಕೋಕಂ ಬೆಣ್ಣೆಯು ಸೌಂದರ್ಯವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಅದನ್ನು ತಲೆಗೂದಲು, ಚರ್ಮ ಮತ್ತು ತುಟಿಗಳಿಗೆ ಲೇಪಿಸಿಕೊಳ್ಳಬಹುದಾಗಿದೆ. ಇದೇ ಕಾರಣದಿಂದಾಗಿ ಕೋಕಂ ಬೆಣ್ಣೆಯನ್ನು ಚರ್ಮದ ಲೋಷನ್‌ಗಳು, ಸಾಬೂನು, ಬಾಮ್‌ಗಳು ಮತ್ತು ಲಿಪ್‌ಸ್ಟಿಕ್‌ಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಅದು ಚರ್ಮಕ್ಕೆ ಮತ್ತು ಕೂದಲಿಗೆ ತೇವಾಂಶವನ್ನು ನೀಡುತ್ತದೆ ಮತ್ತು ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿ ಹೆಚ್ಚು ಸೂಕ್ತವಾಗಿದೆ. ಕೋಕಂ ಎಣ್ಣೆಯು ಸಮೃದ್ಧ ವಿಟಾಮಿನ್ ಹೊಂದಿದ್ದು ಸೇವನೆಗೆ ಯೋಗ್ಯವಾಗಿದೆ. ಸೂಕ್ತ ಪ್ರಮಾಣದಲ್ಲಿ ಈ ಎಣ್ಣೆಯ ಸೇವನೆಯು ಚರ್ಮಕ್ಕೆ ಹೊಸ ಹೊಳಪನ್ನು ನೀಡುತ್ತದೆ ಮತ್ತು ಕಡಿಮೆ ವಯಸ್ಸಾದವರಂತೆ ತೋರುವಂತೆ ಮಾಡುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X