ಭಟ್ಕಳ: ಶ್ರೀಗುರುಸುಧೀಂದ್ರ ಕಾಲೇಜಿನಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ

ಭಟ್ಕಳ, ಎ. 7: ಇಲ್ಲಿನ ಸಾಗರ ರಸ್ತೆಯ ಶ್ರೀ ಗುರು ಸುಧೀಂದ್ರ ಕಾಲೇಜ್ ನಲ್ಲಿ ಆರೋಗ್ಯ ಇಲಾಖೆ ಪ್ರಾಯೋಜಕತ್ವದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ನಾಗೇಶ ಎಮ್. ಭಟ್, ಎಡ್ಸ್ ಕೇವಲ ಲೈಂಗಿಕ ಸಂಪರ್ಕದಿಂದ ಮಾತ್ರವಲ್ಲದೆ ರಕ್ತ ವರ್ಗಾವಣೆಯಿಂದಲೂ ಕೂಡ ಹರಡುತ್ತದೆ, ಹಾಗಾಗಿ ಜಾಗೃತಿ ಕಾರ್ಯಕ್ರಮಗಳು ಖಾಸಗಿ ಹಾಗೂ ಸರ್ಕಾರಿ ವಲಯಗಳ ಸಹಭಾಗಿತ್ವದಲ್ಲಿ ಇ್ನಷ್ಟು ನಡೆಯಬೇಕಿದೆ ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಈರಯ್ಯ ದೇವಾಡಿಗ ಮಾತನಾಡಿ ಇಂದು ಎಚ್. ಐ. ವಿ. ಎಡ್ಸ್ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಜಾಸ್ತಿ ಪ್ರಮಾಣದಲ್ಲಿ ಹರಡುತ್ತಿದ್ದು, ಭಾರತೀಯರಾದ ನಾವು ನಮ್ಮ ಸಂಸ್ಕೃತಿಯನ್ನು ಮರೆಯದೆ ಶಿಸ್ತಿನ ಜೀವನವನ್ನು ನಡೆಸಿದ್ದಲ್ಲಿ ಈ ಮಹಾಮಾರಿಯ ಹರಡುವಿಕೆಯನ್ನು ತಡೆಯಬಹುದು ಎಂದರು.
ಉಪನ್ಯಾಸಕಿ ದೀಕ್ಷಿತಾ ಎಮ್. ಸ್ವಾಗತಿಸಿದರು. ಸಮೃದ್ಧಿ ನಾಯ್ಕಿ ನಿರೂಪಿಸಿದರು. ಫಣಿಯಪ್ಪಯ್ಯ ಹೆಬ್ಬಾರ್ ವಂದಿಸಿದರು.
Next Story





