ಎ.8ರಂದು ಅಂಬಲಪಾಡಿಯಲ್ಲಿ ಜೆಡಿಎಸ್ ಮಹಿಳಾ ಘಟಕದ ಸಮಾವೇಶ
ಉಡುಪಿ, ಎ.7: ಜಾತ್ಯತೀತ ಜನತಾದಳದ ಉಡುಪಿ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಮಹಿಳಾ ಸಮಾವೇಶವನ್ನು ಎ.8ರಂದು ಅಪರಾಹ್ನ 3:30ಕ್ಕೆ ಅಂಬಲಪಾಡಿ ಸವಿತಾ ಸಮಾಜ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಮಹಿಳಾ ಘಟಕದ ಉಡುಪಿ ಜಿಲ್ಲಾಧ್ಯಕ್ಷೆ ಅನಿತಾ ಶೆಟ್ಟಿ, ಈ ಸಮಾವೇಶದಲ್ಲಿ ಜೆಡಿಎಸ್ ರಾಜ್ಯ ಮುಖಂಡರಾದ ಬಿ.ಎಂ.ಫಾರೂಕ್, ಶ್ರೀಕಂಠಯ್ಯ ಮೊದ ಲಾದ ನಾಯಕರು ಭಾಗವಹಿಸಲಿರುವರು ಎಂದು ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವು ಪ್ರಬಲವಾಗಿ ನೆಲೆಯೂರುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಬೈಂದೂರು ಹಾಗೂ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಜಯಭೇರಿ ಗಳಿಸಲಿದೆ. ಕಾಪು ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ಅಂತಿಮ ನಿರ್ಧಾರ ಇನ್ನು ಆಗಬೇಕು ಎಂದರು.
ಬೈಂದೂರಿನಲ್ಲಿ ರವಿ ಶೆಟ್ಟಿ, ಉಡುಪಿಯಲ್ಲಿ ಗಂಗಾಧರ ಬಿರ್ತಿ, ಕುಂದಾಪುರ ದಲ್ಲಿ ಪ್ರಕಾಶ್ ಶೆಟ್ಟಿ ಜೆಡಿಎಸ್ ಅಭ್ಯರ್ಥಿಗಳಾಗಿದ್ದು, ಕಾರ್ಕಳದಲ್ಲಿ ಜೆಡಿಎಸ್ ಬೆಂಬಲಿತ ಬಿಎಸ್‌ಪಿ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದು ಅನಿತಾ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ದಿಲ್‌ಶಾದ್, ನಾಯಕಿಯರಾದ ಜಯಶ್ರೀಕೋಟ್ಯಾನ್, ಐರಿನ್ ಅಲ್ಮೇಡಾ, ಶಬು ವಹಾಬ್ ಉಪಸ್ಥಿತರಿದ್ದರು.





