Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ: ತನುಶ್ರೀ ಪಿತ್ರೋಡಿಯಿಂದ...

ಉಡುಪಿ: ತನುಶ್ರೀ ಪಿತ್ರೋಡಿಯಿಂದ ಗಿನ್ನೆಸ್ ವಿಶ್ವದಾಖಲೆ

ಒಂದು ನಿಮಿಷಕ್ಕೆ 41 ಬಾರಿ ದೇಹ ತಿರುಗಿಸುವ ಸಾಧನೆ

ವಾರ್ತಾಭಾರತಿವಾರ್ತಾಭಾರತಿ7 April 2018 8:59 PM IST
share
ಉಡುಪಿ: ತನುಶ್ರೀ ಪಿತ್ರೋಡಿಯಿಂದ ಗಿನ್ನೆಸ್ ವಿಶ್ವದಾಖಲೆ

ಉಡುಪಿ, ಎ.7: ನೃತ್ಯಪಟು ಒಂಭತ್ತರ ಹರೆಯದ ತನುಶ್ರೀ ಪಿತ್ರೋಡಿ ತನ್ನ ದೇಹದ ಎದೆಯ ಭಾಗ ಹಾಗೂ ತಲೆಯನ್ನು ಸ್ಥಿರವಾಗಿ ಇರಿಸಿ ಉಳಿದ ಭಾಗವನ್ನು ಒಂದು ನಿಮಿಷಕ್ಕೆ 41 ಬಾರಿ ತಿರುಗಿಸುವ (ಮೊಸ್ಟ್ ಫುಲ್ ಬಾಡಿ ರೆವೊಲ್ಯುಶನ್ ಮೈಟೈನಿಂಗ್ ಎ ಚೆಸ್ಟ್ ಸ್ಟಾಂಡ್ ಪೋಸಿಶನ್) ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ.

ಶನಿವಾರ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ತನುಶ್ರೀ ಈ ಪ್ರದರ್ಶನ ನೀಡುವ ಮೂಲಕ ಈ ಹಿಂದೆ ಜೋರ್ಡಾನ್‌ನಲ್ಲಿ ಪ್ಯಾಲೆಸ್ತಿನ್ ದೇಶದ 13 ವರ್ಷ ವಯಸ್ಸಿನ ಮುಹಮ್ಮದ್ ಅಲ್ ಶೇಖ್ (ಒಂದು ನಿಮಿಷಕ್ಕೆ 38 ಬಾರಿ ತಿರುಗುವ) ಎಂಬಾತನ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

ಈ ಸಂದರ್ಭದಲ್ಲಿ ಹಾಜರಿದ್ದ ಗಿನ್ನೆಸ್ ವಿಶ್ವ ದಾಖಲೆಯ ಆಫಿಶಿಯಲ್ ಎಜುಡಿಕೇಟರ್ ಆಗಿರುವ ಮುಂಬೈಯ ಸ್ವಪ್ನಿಲ್ ಡಂರ್ಗಿಕರ್, ತನುಶ್ರೀ ಸಾಧನೆಯ ವಿಡಿಯೋವನ್ನು ಪರಿಶೀಲಿಸಿದರು. ನಂತರ ಆಕೆ ಒಂದು ನಿಮಿಷಕ್ಕೆ 41 ಬಾರಿ ತಿರುಗುವ ಮೂಲಕ ಈ ಹಿಂದಿನ ದಾಖಲೆಯನ್ನು ಮುರಿದು ಗಿನ್ನೆಸ್ ವಿಶ್ವ ದಾಖಲೆ ಮಾಡಿರುವುದಾಗಿ ಅವರು ಘೋಷಿಸಿದರು. ಇದೇ ವೇಳೆ ಗಿನ್ನೆಸ್ ವಿಶ್ವದಾಖಲೆಯ ಪ್ರಮಾಣಪತ್ರವನ್ನು ತನುಶ್ರೀಗೆ ಪ್ರದಾನ ಮಾಡಲಾಯಿತು.

ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಹಾಗೂ ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಈ ಸಾಧನೆಗೆ ಸಾಕ್ಷಿಗಳಾಗಿದ್ದರು. ತನುಶ್ರೀ ತಂದೆ ಉದಯಕುಮಾರ್ ಹಾಗೂ ತಾಯಿ ಸಂಧ್ಯಾ, ಭರತ್ಯನಾಟ್ಯ ಗುರು ರಾಮಕೃಷ್ಣ ಕೊಡಂಚ ಹಾಜರಿದ್ದರು. ಈ ಸಂದರ್ಭದಲ್ಲಿ ವೆಂಕಟರಮಣ ಸ್ಪೋರ್ಟ್ಸ್ ಕ್ಲಬ್‌ನ ಮಲ್ಲೇಶ್ ಕುಮಾರ್, ಉದ್ಯಮಿ ಸಾಧು ಸಾಲಿಯಾನ್, ಉಮೇಶ್ ಕರ್ಕೆರ, ನಿರುಪಮಾ ಶೆಟ್ಟಿ, ಗಿನ್ನೆಸ್ ದಾಖಲೆ ಮಾಡಿರುವ ಡೆನಿಯಲ್ ಮೊಂತೆರೊ, ಗಿರಿಜಾ ತಲ್ಲೂರು, ವಿನಯ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು. ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪಿತ್ರೋಡಿಯಲ್ಲಿ ಎಲೆಕ್ಟ್ರಿಶನ್ ಆಗಿ ದುಡಿಯುತ್ತಿರುವ ಉದಯ ಕುಮಾರ್ ಹಾಗೂ ಸಂಧ್ಯಾ ದಂಪತಿಯ ಪುತ್ರಿಯಾಗಿರುವ ತನುಶ್ರೀ, ಉಡುಪಿ ಸೈಂಟ್ ಸಿಸಿಲೀಸ್ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕನೆ ತರಗತಿಯ ವಿದ್ಯಾರ್ಥಿನಿ. ಈಕೆ ಉಡುಪಿ ಅಕಾಡೆಮಿ ಆಫ್ ಮ್ಯೂಸಿಕ್ ಆ್ಯಂಡ್ ಫೈನ್ ಆರ್ಟ್ಸ್‌ನ ರಾಮಕೃಷ್ಣ ಕೊಡಂಚ ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾಳೆ.

ಮೂರು ವರ್ಷ ಪ್ರಾಯದಲ್ಲಿ ಮಾಸ್ಟರ್ ಡ್ಯಾನ್ಸ್ ಗ್ರೂಪ್‌ನಲ್ಲಿ ನೃತ್ಯ ತರಬೇತಿಯನ್ನು ಆರಂಭಿಸಿದ ತನುಶ್ರೀ ರಾಜ್ಯ ಮಟ್ಟದಲ್ಲಿ ಈವರೆಗೆ 295 ವೇದಿಕೆಯಲ್ಲಿ ನೃತ್ಯ ಕಾರ್ಯಕ್ರಮ ಹಾಗೂ ಸ್ಪರ್ಧೆಯನ್ನು ನೀಡಿದ್ದಾರೆ.

ತನುಶ್ರೀ 2017ರ ನ.11ರಂದು ಉಡುಪಿಯಲ್ಲಿ ಯೋಗಾಸನದ ಕಠಿಣ ಭಂಗಿಯಾಗಿರುವ ನಿರಾಲಂಭ ಪೂರ್ಣಚಕ್ರಾಸನವನ್ನು ಒಂದು ನಿಮಿಷದಲ್ಲಿ 19 ಬಾರಿ ಮಾಡುವುದರ ಮೂಲಕ ಗೋಲ್ಡನ್ ಬುಕ್ ಆಫ್ ವಲ್ಡ್ ರೆರ್ಕಾಡ್ ಮಾಡಿದ್ದರು.

ತನುಶ್ರೀಗೆ ತಾಯಿಯೇ ಗುರು

ನೃತ್ಯಪಟು ಆಗಿರುವ ತನುಶ್ರೀ ಹೆಚ್ಚಿನ ಡ್ಯಾನ್ಸ್‌ಗಳನ್ನು ಯೂಟ್ಯೂಬ್ ವೀಡಿಯೊ ನೋಡಿ ಅಭ್ಯಾಸ ಮಾಡುತ್ತಿದ್ದಳು. ನೋಡಿ ಕಲಿಯುವಂತಹ ಪ್ರತಿಭೆ ಹೊಂದಿರುವ ತನುಶ್ರೀ, ಈ ಹಿಂದೆ ಮಾಡಿದ ಗೋಲ್ಡನ್ ದಾಖಲೆಯ ‘ನಿರಾಲಂಬ ಪೂರ್ಣ ಚಕ್ರಾಸನ’ವನ್ನು ಯೂಟ್ಯೂಬ್ ವೀಡಿಯೊ ಮೂಲಕ ಅಭ್ಯಾಸ ಮಾಡಿದ್ದಳು.

ತನುಶ್ರೀ ತನ್ನ ನೃತ್ಯ ಪ್ರದರ್ಶನದಲ್ಲಿ ಎದೆಯ ಭಾಗವನ್ನು ಸ್ಥಿರವಾಗಿ ಇರಿಸಿ ಉಳಿದ ಭಾಗವನ್ನು ತಿರುಗಿಸುತ್ತ ನೃತ್ಯವನ್ನು ಮಾಡುತ್ತಿದ್ದರು. ಈಕೆಯ ತಂದೆ ಉದಯ ಕುಮಾರ್ ತನ್ನ ಮಗಳು ಗಿನ್ನೆಸ್ ದಾಖಲೆ ಮಾಡುವುದಕ್ಕಾಗಿ ಇಂಟರ್‌ನೆಟ್‌ನಲ್ಲಿ ಹುಡುಕುತ್ತಿದ್ದಾಗ ಅವರಿಗೆ ಮುಹಮ್ಮದ್ ಅಲ್ ಶೇಖ್ ನ ಈ ಸಾಧನೆ ಕಂಡುಬಂತು.

ಇದೇ ರೀತಿ ತನುಶ್ರೀ ನಾಲ್ಕು ತಿಂಗಳುಗಳ ಕಾಲ ಯೂಟ್ಯೂಬ್ ನೋಡಿ ಮನೆಯಲ್ಲೇ ಅಭ್ಯಾಸ ಮಾಡಿದ್ದಳು. ಇವಳಿಗೆ ಮನೆಯಲ್ಲಿ ಪ್ರತಿದಿನ ಇದನ್ನು ಹೇಳಿ ಕೊಡುತ್ತ ಗುರುವಾಗಿದ್ದದ್ದು ಆಕೆಯ ತಾಯಿ ಸಂಧ್ಯಾ.

ಮಗಳ ಸಾಧನೆ ನಮಗೆ ಖುಷಿ ತಂದಿದೆ. ಅವಳಿಗೆ ನಾವು ಎಲ್ಲ ರೀತಿಯ ಪ್ರೋತ್ಸಾಹ ನೀಡಿದ್ದೇವೆ. ನೋಡಿ ಕಲಿಯುವ ಆಸಕ್ತಿ ಹೊಂದಿರುವುದೇ ಅವಳ ಈ ಸಾಧನೆಗೆ ಮುಖ್ಯ ಕಾರಣ. ಮುಂದೆ ಆಕೆ ಯೋಗದ ಮೂಲಕ ಭಾರತವನ್ನು ಪ್ರತಿನಿಧಿಸಬೇಕೆಂಬುದೇ ನಮ್ಮ ಆಸೆ.
-ಉದಯ ಕುಮಾರ್, ತನುಶ್ರೀ ತಂದೆ

 

ನಾಲ್ಕು ತಿಂಗಳ ಪ್ರಯತ್ನದಿಂದ ಈ ಸಾಧನೆಯನ್ನು ಮಾಡಿದ್ದೇನೆ. ಈ ಸಾಧನೆ ಯನ್ನು ನಾನು ದೇಶಕ್ಕೆ ಅರ್ಪಣೆ ಮಾಡುತ್ತಿದ್ದೇನೆ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಅಭ್ಯಾಸ ಮಾಡುತ್ತಿದ್ದೆ. ಎಲ್ಲವನ್ನು ಮನೆಯಲ್ಲಿ ಅಭ್ಯಾಸ ಮಾಡಿರುವುದು. ತಂದೆ ತಾಯಿ ನನಗೆ ತುಂಬಾ ಪ್ರೋತ್ಸಾಹ ನೀಡಿದ್ದಾರೆ. ಮುಂದೆ ಯೋಗ ಸ್ಪರ್ಧೆಯಲ್ಲಿ ಸಾಧನೆ ಮಾಡಬೇಕು ಎಂಬುದು ನನ್ನ ಗುರಿ.
-ತನುಶ್ರೀ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X