ಜೂಜಾಟ ಅಡ್ಡೆಗೆ ದಾಳಿ: 11 ಮಂದಿ ಸೆರೆ
ಮಂಗಳೂರು, ಎ. 7: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಂಪ್‌ವೆಲ್ ಬಳಿಯ ಫ್ಲಾಟ್‌ವೊಂದರಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಕ್ರಮವಾಗಿ ಅಂದರ್ - ಬಾಹರ್ ಜೂಜಾಟವಾಡುತ್ತಿದ್ದ 11 ಜನರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪಂಪ್‌ವೆಲ್ ಅಪಾರ್ಟ್‌ಮೆಂಟ್‌ನ ಫ್ಲಾಟ್‌ವೊಂದರಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಸ್ಥಳಕ್ಕೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾಗಿದ್ದ ಅರುಣ್ ಭಂಡಾರಿ, ವಿಶ್ವನಾಥ, ಹನೀಫ್, ಮೋಹನ್ ದಾಸ್, ಜರ್ನಾಧನ ಬಾಬು, ಕೃಷ್ಣ ಮೂರ್ತಿ ಐತಾಳ್, ಮಾರ್ಕ್ ಪಿಂಟೋ, ಗೌರಿಶ್, ಪ್ರಶಾಂತ್, ಸಂಶುದ್ದೀನ್, ಅಬೂಬಕರ್ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಿಂದ 66,070 ರೂ., ಮೊಬೈಲ್ ಫೋನ್‌ಗಳು ಹಾಗೂ ಜೂಜಾಟಕ್ಕೆ ಉಪಯೋಗಿಸಿದ ಇಸ್ಪೀಟ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
Next Story





