ಮಂಡ್ಯ: ರಾಸಾಯನಿಕ ಮಿಶ್ರಿತ ನೀರು ಕುಡಿದು 13 ಮೇಕೆಗಳು ಸಾವು

ಮಂಡ್ಯ, ಎ.7: ಕಬ್ಬಿನ ಗದ್ದೆಯಲ್ಲಿ ನೀರು ಕುಡಿದ 13 ಮೇಕೆಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊನಗನಳ್ಳಿಮಠ ಗ್ರಾಮದಲ್ಲಿ ಶನಿವಾರ ನಡೆದಿದೆ.
ಕಬ್ಬಿನ ಗದ್ದೆ ಪಕ್ಕದಲ್ಲಿ ವೀರ ಎಂಬುವರು ಮೇಕೆಗಳನ್ನು ಮೇಯಿಸುತ್ತಿದ್ದು, ಗದ್ದೆಯಲ್ಲಿದ್ದ ನೀರನ್ನು ಕುಡಿದ ಮೇಕೆಗಳು ಸಾವನ್ನಪ್ಪಿದವು ಎನ್ನಲಾಗಿದೆ.
ಕಬ್ಬಿಗೆ ಹಾಕಿದ್ದ ರಾಸಾಯನಿಕ ಗೊಬ್ಬರ ನೀರಿನಲ್ಲಿ ಮಿಶ್ರಿತವಾಗಿದ್ದು, ಈ ಕಾರಣಕ್ಕೆ ಮೇಕೆಗಳು ಸಾವನ್ನಪ್ಪಿವೆ ಎಂದು ಪಶು ವೈದ್ಯಾಧಿಕಾರಿ ವಿವೇಕಾನಂದ ತಿಳಿಸಿದ್ದಾರೆ.
ಮೇಕೆಗಳ ಸಾವಿನಿಂದ ಸುಮಾರು 1 ಲಕ್ಷ ರೂ. ನಷ್ಟವಾಗಿದ್ದು, ಪರಿಹಾರ ನೀಡುವಂತೆ ವೀರ ಅವರು ಮನವಿ ಮಾಡಿದ್ದಾರೆ.
Next Story





